Friday, January 21, 2022

ಅಮೆರಿಕದಲ್ಲಿ ಗಲಭೆ ಸಾಧ್ಯತೆ; ಎಲ್ಲೆಡೆ ಬಿಗಿ ಬಂದೋಬಸ್ತ್, ಟ್ರೆಂಡ್ ಆದ ಟ್ರಂಪ್

Follow Us

newsics.com
ವಾಷಿಂಗ್ಟನ್: ಅಧಿಕೃತ ಫಲಿತಾಂಶ ಪ್ರಕಟವಾದ ಬಳಿಕ ಅಮೆರಿಕದ ವಿವಿಧೆಡೆ ಮತ್ತಷ್ಟು ಗಲಭೆ ಮತ್ತು ಹಿಂಸಾಚಾರ ಭುಗಿಲೇಳುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆಗಳು ಸುಳಿವು ನೀಡಿವೆ.
ಈ ಹಿನ್ನೆಲೆಯಲ್ಲಿ ಶ್ವೇತಭವನ ಸುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ವಾಷಿಂಗ್ಟನ್, ನ್ಯೂಯಾರ್ಕ್ ಸೇರಿದಂತೆ ಅಮೆರಿಕದ 50 ಪ್ರಾಂತ್ಯಗಳಾದ್ಯಂತ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ ಡೊನಾಲ್ಡ್ ಟ್ರಂಪ್ ಕಾನೂನು ಸಮರ ಆರಂಭಿಸಿರುವ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಮತ್ತು ಕಾರ್ಯಕರ್ತರು ಹಿಂಸಾಚಾರಕ್ಕೆ ಇಳಿಯುವ ಸಾಧ್ಯತೆ ದಟ್ಟವಾಗಿದೆ ಎಂದು ಗುಪ್ತಚರ ಇಲಾಖೆಗಳು ಹೇಳಿವೆ.

ಟ್ರಂಪ್ ಹಿನ್ನಡೆ; ಅಮೆರಿಕದ ಹಲವೆಡೆ ಪ್ರತಿಭಟನೆ, ಹಿಂಸಾಚಾರ

ಈ ಮಧ್ಯೆ, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ಗೆಲುವಿನತ್ತ ದಾಪುಗಾಲು ಹಾಕಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆಲುವಿನ ಆಸೆ ಭಗ್ನಗೊಂಡಿದೆ. ಈ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೇಳಬಹುದು ಎಂದು ಶಂಕಿಸಲಾಗಿದೆ.
ಮತ ಎಣಿಕೆಯಲ್ಲಿ ಜೋ ಬಿಡೆನ್ ಮುನ್ನಡೆ ಕಾಯ್ದುಕೊಂಡಿದ್ದರೆ, ಸಾಮಾಜಿಕ ಜಾಲತಾಣದಲ್ಲಿ “Donald Trump You Are Fired” ಎಂಬ ಸಂದೇಶಗಳು ಸಖತ್ ಸದ್ದು ಮಾಡುತ್ತಿವೆ.
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಒಟ್ಟು 538 ಮತಗಳ ಪೈಕಿ ಅಧ್ಯಕ್ಷರಾಗಿ ಆಯ್ಕೆಯಾಗುವುದಕ್ಕೆ ಕನಿಷ್ಠ 270 ಮತಗಳ ಅಗತ್ಯವಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಜೋ ಬಿಡೆನ್ 253 ಮತಗಳನ್ನು ಪಡೆದುಕೊಳ್ಳುವ ಮೂಲಕ ಮುನ್ನಡೆ ಕಾಯ್ದುಕೊಂಡಿದ್ದಾರೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ 213 ಮತಗಳೊಂದಿಗೆ ಹಿನ್ನಡೆ ಅನುಭವಿಸಿದ್ದಾರೆ.
ಅಮೆರಿಕ ಸರ್ಕಾರದ ನೀತಿಶಾಸ್ತ್ರ ಕಚೇರಿಯ ಮಾಜಿ ನಿರ್ದೇಶಕ ವಾಲ್ಟರ್ ಶುವಾಬ್, “Donald Trump You Are Fired”
ಈ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್ ಅವರೇ ನಿಮ್ಮನ್ನು ವಜಾಗೊಳಿಸಲಾಗಿದೆ. ನೀವು ಮನೆಗೆ ಹೋಗಿ. ಮ್ಯಾನ್ ಹ್ಯಾಟನ್ ನಿಂದ ಹೊರಗೆ ಹೋಗಬೇಡಿ ಎಂದು ವೆಸ್ಟ್ ಇಸ್ ದಿ ಬೆಸ್ಟ್ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಶುಕ್ರವಾರದ ವೇಳೆಗೆ ಹೊರಬೀಳಲಿದೆ. ಶುಕ್ರವಾರವೇ ಅವರು ಸರ್ಕಾರಿ ಕಚೇರಿಗಳನ್ನು ಖಾಲಿ ಮಾಡಿಕೊಂಡು ಹೋಗುತ್ತಾರೆ. ಟ್ರಂಪ್ ಯು ಆರ್ ಫೈಯರ್ಡ್ ಎಂದು ಅಬೂಬಕರ್ ಅಲಿ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಭಾರತೀಯರಿಗೆ, ದೇಶದಲ್ಲಿನ ವಿದೇಶಿಯರಿಗೆ ಚೀನಾ ತಾತ್ಕಾಲಿಕ ನಿರ್ಬಂಧ

ನಿಬ್ಬೆರಗುಗೊಳಿಸುತ್ತಿರುವ ಪ್ರಣೀತಾ ಸುಭಾಷ್ ಯೋಗಾಭ್ಯಾಸ

ತಿರುಪತಿ ತಿಮ್ಮಪ್ಪನಿಗೆ ಒಂದೇ ದಿನ 1.74 ಕೋಟಿ ರೂಪಾಯಿ ರೂಪಾಯಿ ಕಾಣಿಕೆ

ಮತ್ತಷ್ಟು ಸುದ್ದಿಗಳು

Latest News

ಪತಿಯ ಹತ್ಯೆಗೆ ಬಂದವರಿಗೆ ಖಾರದ ಪುಡಿ ಎರಚಿ ಪ್ರಾಣ ಉಳಿಸಿದ ಮಹಿಳೆ

newsics.com ಹೈದರಾಬಾದ್‌ : ಪತಿಯ ಹತ್ಯೆಗೆ ಬಂದಿದ್ದ ನಾಲ್ವರ ಕಣ್ಣಿಗೆ ಖಾರದ ಪುಡಿ ಬಿಸಾಡಿ   ಪತಿಯನ್ನು ಉಳಿಸಿಕೊಂಡ ಘಟನೆ ತೆಲಂಗಾಣದ ವಾರಂಗಲ್‌ನ ಶಂಭುನಿಪೇಟೆಯಲ್ಲಿ ನಡೆದಿದೆ. ದಿ ವಾರಂಗಲ್ ಜಿಲ್ಲಾ ಲಾರಿ...

ಮೈಸೂರಿನಿಂದ ಚೆನ್ನೈಗೆ ವಿಮಾನದ ಮೂಲಕ ಜೀವಂತ ಹೃದಯ ರವಾನೆ

newsics.com ಮೈಸೂರು: ಮೆದುಳು ನಿಷ್ಕ್ರಿಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಹೃದಯವನ್ನು ಮೈಸೂರಿನಿಂದ ಚೆನ್ನೈಗೆ ವಿಮಾನದ ಮೂಲಕ ರವಾನೆ ಮಾಡಲಾಗಿದೆ. ಜನವರಿ 18ರಂದು ರಸ್ತೆ ಅಪಘಾತದಿಂದ ದರ್ಶನ್(24) ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಯುವಕನ ಮೆದುಳು ನಿಷ್ಕ್ರಿಯವಾಗಿದ್ದ ಕಾರಣ ಅವರ...

ಒಂದೇ ಮೊಬೈಲ್ ಸಂಖ್ಯೆಯಿಂದ ಇನ್ನುಮುಂದೆ ಆರು ಮಂದಿ ಕೋವಿಡ್ ಲಸಿಕೆ ನೋಂದಾಯಿಸಬಹುದು

newsics.com ನವದೆಹಲಿ: ಕೋವಿಡ್ ಲಸಿಕೆಯನ್ನು ಹಾಕಲು ಕೋ-ವಿನ್ ವೆಬ್‌ಸೈಟ್‌ನಲ್ಲಿ ಒಂದು ಮೊಬೈಲ್ ಸಂಖ್ಯೆ ಬಳಸಿ ಆರು ಮಂದಿಯ ಹೆಸರನ್ನು ನೋಂದಾಯಿಸಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯು  ತಿಳಿಸಿದೆ. ಮೊದಲು ಒಂದು ಮೊಬೈಲ್ ಸಂಖ್ಯೆಯ ಮೂಲಕ  ನಾಲ್ಕು...
- Advertisement -
error: Content is protected !!