newsics.com
ಮೆಕ್ಸಿಕೊ: ಟ್ರಕ್ ವೊಂದು ಅಪಘಾತಕ್ಕೆ ಒಳಗಾದ ಪರಿಣಾಮ 10 ಜನ ವಲಸಿಗರು ಸಾವನ್ನಪಿರುವ ಘಟನೆ ದಕ್ಷಿಣ ರಾಜ್ಯ ಚೈಪಾಸ್ನಲ್ಲಿ ನಡೆದಿದೆ.
ಅಪಘಾತದಲ್ಲಿ 17 ಜನ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಮತ್ತು ಗಾಯಾಳುಗಳು ಕ್ಯೂಬಾ ವಲಸಿಗರು ಎಂದು ಗುರುತಿಸಲಾಗಿದೆ.
ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಅತೀ ವೇಗದ ಚಾಲನೆ ಅಪಘಾತಕ್ಕೆ ಕಾರಣವೆಂದು ಹೇಳಲಾಗುತ್ತಿದೆ.