ಬಾಗ್ದಾದ್: ಇಲ್ಲಿನ ಅಮೆರಿಕ ರಾಯಭಾರಿ ಕಚೇರಿಯ ಬಳಿ ಭಾನುವಾರ ಹಲವು ರಾಕೆಟ್‌ಗಳು ಅಪ್ಪಳಿಸಿವೆ.
ಟಿಗ್ರಿಸ್‌ನ ಪಶ್ಚಿಮ ದಂಡೆಯಿಂದ ಭಾರೀ ಶಬ್ದಗಳನ್ನು ಸ್ಥಳೀಯರು ಕೇಳಿದ್ದಾರೆ. ಈ ಪ್ರದೇಶದಲ್ಲಿ ಹಲವು ದೇಶಗಳ ರಾಯಭಾರಿ ಕಚೇರಿಗಳಿವೆ.
ಮೂರು ಕತ್ಯೂಷಾ ರಾಕೆಟ್‌ಗಳು ಭಾರೀ ಬಿಗಿ ಭದ್ರತೆಯ ಈ ಪ್ರದೇಶವನ್ನು ಅಪ್ಪಳಿಸಿದೆ ಎಂದು ಭದ್ರತಾ ಮೂಲವೊಂದು ತಿಳಿಸಿದ್ದರೆ, ಐದು ರಾಕೆಟ್‌ಗಳು ಈ ಪ್ರದೇಶದಲ್ಲಿ ಬಿದ್ದಿವೆ ಎಂದು ಇನ್ನೊಂದು ಭದ್ರತಾ ಮೂಲ ಹೇಳಿದೆ.
ಇರಾಕ್ ನ ಅಮೆರಿಕ ರಾಯಭಾರಿ ಕಚೇರಿ ಬಳಿ ರಾಕೆಟ್ ದಾಳಿ
Follow Us