newsics.com
ಢಾಕಾ: ಬಾಂಗ್ಲಾದೇಶ ಎದುರಿನ ದ್ವಿತೀಯ ಏಕದಿನ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ನಾಯಕ ರೋಹಿತ್ ಶರ್ಮಾ ಅವರ ಬೆರಳಿಗೆ ಗಾಯವಾಗಿದೆ. ರೋಹಿತ್ ಶರ್ಮಾ ಅವರ ತೋರು ಬೆರಳಿಗೆ ಗಾಯವಾಗಿದ್ದು ಸ್ಕ್ಯಾನಿಂಗ್ ಮಾಡಲಾಗಿದೆ ಎಂದು ಭಾರತ ಕ್ರಿಕೆಟ್ ತಂಡದ ಮೂಲಗಳು ತಿಳಿಸಿವೆ.
ಎರಡನೇ ಏಕದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಎರಡು ಬದಲಾವಣೆ ಕೂಡ ಮಾಡಿದೆ.
ಭಾರತ ಶಹಬಾಜ್ ಅಹ್ಮದ್ ಮತ್ತು ಕುಲದೀಪ್ ಸೆನ್ ಅವರನ್ನು ಕೈ ಬಿಟ್ಟು ಅಕ್ಷರ್ ಪಟೇಲ್ ಮತ್ತು ಉಮ್ರಾನ್ ಮಲಿಕ್ ಅವರನ್ನು ತಂಡಕ್ಕೆ ಸೇರಿಸಿದೆ. ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾ ದೇಶ , ಭಾರತವನ್ನು ಒಂದು ವಿಕೆಟ್ ನಿಂದ ಸೋಲಿಸಿತ್ತು.