newsics.com
ವಾಶಿಂಗ್ಟನ್: ಅಮೆರಿಕ ಸುಪ್ರೀಂಕೋರ್ಟ್‌ನ ಜನಪ್ರಿಯ ನ್ಯಾಯಮೂರ್ತಿ ರುತ್ ಬ್ಯಾಡರ್ ಗಿನ್ಸ್‌ಬರ್ಗ್ (87) ಅವರು ಶನಿವಾರ ನಿಧನರಾದರು.
ಅಭಿಮಾನಿಗಳಿಂದ ‘ನಟೋರಿಯಸ್ ಆರ್‌ಬಿಜಿ’ ಎಂದೇ ಕರೆಸಿಕೊಳ್ಳುತ್ತಿದ್ದ ಗಿನ್ಸ್‌ಬರ್ಗ್ ಅವರು ಅಮೆರಿಕ ಸುಪ್ರೀಂಕೋರ್ಟ್‌ನ 9 ನ್ಯಾಯಮೂರ್ತಿಗಳ ಪೈಕಿ ಅತ್ಯಂತ ಹಿರಿಯ ವಯಸ್ಸಿನವರು. ಕಳೆದ ಕೆಲವು ಸಮಯದಿಂದ ಪ್ಯಾನ್‌ಕ್ರಿಯಾಟಿಕ್ (ಮೆದೋಜ್ಜೀರಕಗ್ರಂಥಿ) ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರು. ಶನಿವಾರ ಅವರು ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಗಿನ್ಸ್‌ಬರ್ಗ್ ಅಸ್ವಸ್ಥರಾಗಿ ಆಸ್ಪತ್ರೆಯಲ್ಲೇ ಇದ್ದರೂ ಮಲಗಿದ್ದಲ್ಲಿಂದಲೇ ಅವರು ಪ್ರಕರಣಗಳು ವಾದಗಳನ್ನು ಅಲಿಸುತ್ತಿದ್ದರು ಹಾಗೂ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಉದಾರವಾದಿ ನಿಲುವುಗಳಿಂದ ಅವರು ಜನಪ್ರಿಯರಾಗಿದ್ದರು. ಗಿನ್ಸ್‌ಬರ್ಗ್ ನಿಧನದಿಂದಾಗಿ ನ್ಯಾಯಾಲಯದಲ್ಲಿ ಸಂಪ್ರದಾಯವಾದಿಗಳ ಪ್ರಾಬಲ್ಯ ಅಧಿಕವಾಗುವ ಸೂಚನೆಗಳು ಕಂಡುಬರುತ್ತಿವೆ. ನೂರಾರು ಅಭಿಮಾನಿಗಳು ವಾಶಿಂಗ್ಟನ್‌ನಲ್ಲಿರುವ ಅಮೆರಿಕದ ಸುಪ್ರೀಂಕೋರ್ಟ್ ಮುಂದೆ ಪುಷ್ಪಗುಚ್ಛಗಳನ್ನಿರಿಸಿ, ಮೊಂಬತ್ತಿಗಳನ್ನು ಬೆಳಗಿ ಗಿನ್ಸ್‌ಬರ್ಗ್ ಅವರ ನಿಧನಕ್ಕೆ ಶೃದ್ಧಾಂಜಲಿ ಅರ್ಪಿಸಿದರು.
ಅಮೆರಿಕ ಸುಪ್ರೀಂ ಕೋರ್ಟ್‌ನ ಜನಪ್ರಿಯ ನ್ಯಾಯಮೂರ್ತಿ ರುತ್ ಬ್ಯಾಡರ್ ಇನ್ನಿಲ್ಲ
Follow Us