newsics.com
ಸೌದಿ ಅರೇಬಿಯಾ: ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದ ಜನರ ಹಿತ ಕಾಪಾಡುವ ಉದ್ದೇಶದಿಂದ ಸೌದಿ ಅರೇಬಿಯಾ ಭಾರತ,ಬ್ರೆಜಿಲ್ ಮತ್ತು ಅರ್ಜೆಂಟೀನಾದ ವಿಮಾನಗಳ ಹಾರಾಟಕ್ಕೆ ನಿಷೇಧ ಹೇರಿದೆ. ಈ ಬಗ್ಗೆ ಸೌದಿ ಅರೇಬಿಯಾದ ನಾಗರೀಕ ವಿಮಾನಯಾನ ನಿಯಂತ್ರಕ ಸಚಿವಾಲಯ ಪ್ರಕಟಣೆ ಹೊರಡಿಸಿದೆ.
ಜಿಎಸಿಎಯ ನೀಡಿದ ಮಾಹಿತಿ ಪ್ರಕಾರ, ಕಳೆದ 14 ದಿನಗಳಲ್ಲಿ ಸರ್ಕಾರಿ ಆಹ್ವಾನದ ವಿನಃ ಭಾರತ,ಬ್ರೆಜಿಲ್ ಹಾಗೂ ಅರ್ಜೆಂಟೈನಾದ ಯಾವುದೇ ವ್ಯಕ್ತಿಗಳಿಗೆ ಸೌದಿ ಅರೇಬಿಯಾಕ್ಕೆ ಬರಲು ಅನುಮತಿ ಬರಲು ಅವಕಾಶ ನೀಡಲಾಗುತ್ತಿಲ್ಲ.
ಅಲ್ಲದೇ ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ಸೌದಿ ಅರೇಬಿಯಾಕ್ಕೆ ಯಾವುದೇ ವಿಮಾನಗಳು ಹಾರಲು ಸಹ ಅನುಮತಿ ನೀಡಲಾಗಿಲ್ಲ. ಸೌದಿ ಅರೇಬಿಯಾ ಕೂಡ ಇತರ ರಾಷ್ಟ್ರಗಳಿಗೆ ವಿಮಾನಯಾನ ಸೇವೆ ನೀಡುತ್ತಿಲ್ಲ. ಎಲ್ಲಿಯವರೆಗೆ ಈ ನಿರ್ಬಂಧ ಮುಂದುವರೆಯಲಿದೆ ಎಂಬ ಬಗ್ಗೆ ಸೌದಿ ಯಾವುದೇ ನಿಗದಿತ ಮಾಹಿತಿ ನೀಡಿಲ್ಲ.
ಮುಂಬೈನಲ್ಲಿ ಆಕ್ಸ್ಫರ್ಡ್ ಲಸಿಕೆ ಮಾನವ ಪ್ರಯೋಗ ಆರಂಭ
ಎಸ್‍ಎಸ್‍ಎಲ್‍ಸಿ, ಪಿಯುಸಿ ಟಾಪರ್ ವಿದ್ಯಾರ್ಥಿಗಳಿಗೆ ಕಾರ್ ಗಿಫ್ಟ್ ಕೊಟ್ಟ ಶಿಕ್ಷಣ ಸಚಿವ
ಸದ್ಯದಲ್ಲೇ ಆಸ್ಪತ್ರೆಯಿಂದ ಮನೆಗೆ ಮರಳಲಿರುವ ಗಾಯಕ ಎಸ್‍ಪಿಬಿ
ಊಟ ಬಂದಾಗ ಡಾನ್ಸ್ ಮಾಡುವ ನಾಯಿ…!