newsics.com
ರಿಯಾದ್: ಕೊರೊನಾ ಹೆಚ್ಚಳದ ಹಿನ್ನೆಲೆ ಸೌದಿ ಅರೇಬಿಯಾವು 15 ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಿದೆ.
ಭಾರತ ಸೇರಿದಂತೆ ಲೆಬನಾನ್, ಸಿರಿಯಾ, ಟರ್ಕಿ, ಇರಾನ್, ಅಫ್ಘಾನಿಸ್ತಾನ, ಯೆಮೆನ್, ಸೊಮಾಲಿಯ, ಇಥಿಯೋಪಿಯಾ, ಕಾಂಗೋ, ಲಿಬಿಯಾ, ಇಂಡೋನೇಷಿಯಾ, ವಿಯೆಟ್ನಾಮ್, ಅರ್ಮೇನಿಯ,ಬೆಲಾರಸ್,ವೆನೆಜುವೆಲಾ, ದೇಶಗಳಿಗೆ ಪ್ರಯಾಣಿಸದಂತೆ ಸೌದಿ ಅರೇಬಿಯಾ ನಿಷೇಧ ಹೇರಿದೆ.
ಕೊರೊನಾ ಸೋಂಕು ಮತ್ತು ಮಂಕಿ ಫಾಕ್ಸ್ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಇತರ ದೇಶಗಳಿಗೆ ಪ್ರಯಾಣಿಸದಂತೆ ಸೂಚನೆ ನೀಡಿದೆ.