ಕುವೈತ್: ಇಲ್ಲಿನ ಸಾಲ್ಮಿಯಾ ಬೀಚ್ನಲ್ಲಿ ಇಬ್ಬರು ಈಜಿಪ್ಟ್ ಪ್ರಜೆಗಳನ್ನು ರಕ್ಷಿಸಿದ ಮಂಗಳೂರಿನ ಯುವಕನೊಬ್ಬ ಭಾರಿ ಅಲೆಗೆ ಸಿಲುಕಿ ಸಮುದ್ರ ಪಾಲಾಗಿದ್ದಾನೆ.
ಮಂಗಳೂರಿನ ಕಿನ್ನಿಗೋಳಿ ಮೂಲದ ಮೊಹಮ್ಮದ್ ಅನೀಸ್ ಮೃತಪಟ್ಟವರಾಗಿದ್ದು, ಇಂಟೀರಿಯರ್ ಡಿಸೈನರ್ ಆಗಿ ವರ್ಷದ ಹಿಂದೆ ಕುವೈತ್ಗೆ ತೆರಳಿದ್ದರು.
ರೋಗನಿರೋಧಕ ಶಕ್ತಿ ಹೆಚ್ಚಿಸಿದ ಆಕ್ಸ್ಫರ್ಡ್ ವಿವಿಯ ಕೊರೋನಾ ಲಸಿಕೆ
ಶನಿವಾರ ಸಂಜೆ ಗೆಳೆಯರ ಜತೆ ಅನೀಸ್ ಸಾಲ್ಮಿಯಾ ಬೀಚ್ಗೆ ತೆರಳಿದ್ದಾಗ ಈಜಾಡುತ್ತಿದ್ದ ಇಬ್ಬರು ಈಜಿಪ್ಟ್ ಪ್ರಜೆಗಳು ಅಲೆಗಳ ಅಬ್ಬರಕ್ಕೆ ಸಿಲುಕಿ ಮುಳುಗುತ್ತಿದ್ದರು. ಇದನ್ನು ಗಮನಿಸಿದ ಅನೀಸ್ ಅವರಿಬ್ಬರನ್ನೂ ರಕ್ಷಿಸಿ ದಡ ಸೇರಿಸಿದ್ದಾರೆ. ಆದರೆ, ಅನೀಸ್ ದಡ ಸೇರುವಷ್ಟರಲ್ಲಿ ಬೃಹತ್ ಅಲೆಯೊಂದು ಬಂದು ಅವರನ್ನು ಸೆಳೆದುಕೊಂಡು ಹೋಗಿದೆ. ಕುವೈತ್ ನೇವಿ, ಕೋಸ್ಟ್ಗಾರ್ಡ್ ನವರ ಸತತ ಶೋಧ ಕಾರ್ಯಾಚರಣೆಯ ಬಳಿಕ ಭಾನುವಾರ ಬೆಳಗ್ಗೆ ಅನೀಸ್ ಮೃತದೇಹ ಪತ್ತೆಯಾಗಿದೆ.
ಅನೀಸ್ ಅವರಿಗೆ ತಂದೆ, ತಾಯಿ ಹಾಗೂ ಇಬ್ಬರು ಸಹೋದರಿಯರಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಅನೀಸ್ ಅವರ ಅಂತ್ಯಕ್ರಿಯೆಯನ್ನು ಕುವೈತ್ನಲ್ಲೇ ನಡೆಸಲು ನಿರ್ಧರಿಸಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.