Saturday, February 27, 2021

ಕಾಬೂಲ್’ನಲ್ಲಿ ಸರಣಿ ಸ್ಫೋಟ; ಪೊಲೀಸ್ ಅಧಿಕಾರಿಗಳಿಬ್ಬರ ಸಾವು, ಮೂವರಿಗೆ ಗಾಯ

newsics.com
ಕಾಬೂಲ್: ಆಫ್ಘನ್ ರಾಜಧಾನಿಯಲ್ಲಿ ಇಂದು(ಡಿ.26) ಮುಂಜಾನೆ ಸಂಭವಿಸಿದ ಸರಣಿ ಸ್ಫೋಟದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.
ಉಗ್ರರು ಪೊಲೀಸ್ ವಾಹನದಲ್ಲಿ ಅಳವಡಿಸಿದ್ದ ಡೆಟೋನೇಟರ್’ಗಳು ಸ್ಫೋಟಗೊಂಡು ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಇಲಾಖೆ ವಕ್ತಾರ ಫರ್ದ್‍ವಾಜ್ ಪರಮಾರ್ಜ್ ತಿಳಿಸಿದ್ದಾರೆ.
ವೆಸ್ಟರ್ನ್ ಕಾಬೂಲ್‍ನಲ್ಲಿ ಪೊಲೀಸ್ ವಾಹನಕ್ಕೆ ಅಳವಡಿಸಿದ್ದ ಮ್ಯಾಗ್ನೆಟಿಕ್ ಬಾಂಬ್ ಸ್ಫೋಟಗೊಂಡು ಇಬ್ಬರು ಪೊಲೀಸರು ಮೃತಪಟ್ಟು ನಾಗರಿಕರೊಬ್ಬರು ಗಾಯಗೊಂಡಿದ್ದಾರೆ. ದಕ್ಷಿಣ ಕಾಬೂಲ್ ಪ್ರಾಂತ್ಯದಲ್ಲಿ ಕಾರಿಗೆ ಅಳವಡಿಸಲಾಗಿದ್ದ ಬಾಂಬ್ ಸ್ಫೋಟಗೊಂಡು ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಪೂರ್ವ ಕಾಬೂಲಿನಲ್ಲಿ ಸಂಭವಿಸಿದ ಮೂರನೆ ಬಾಂಬ್ ಸ್ಫೋಟದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ತಾಲಿಬಾನ್ ಮತ್ತು ಆಫ್ಘನ್ ಸರ್ಕಾರಗಳ ನಡುವೆ ಶಾಂತಿ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲೇ ಉಗ್ರರು ನಡೆಸಿರುವ ದಾಳಿ ಆಫ್ಘಾನಿಸ್ತಾನವನ್ನು ಬೆಚ್ಚಿ ಬೀಳಿಸಿದೆ. ಸ್ಫೋಟದ ಹೊಣೆಯನ್ನು ಈವರೆಗೆ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.

ಕ್ಯಾನ್ಸರ್’ಗೆ ಕಾರಣವಾಗುವ ಡಿಎನ್ಎ ಪತ್ತೆ

ಪ್ರವಾಸಿಗರ ಕಿರುಚಾಟ: ಅಟ್ಟಿಸಿಕೊಂಡು ಬಂದ ಕಾಡಾನೆಗಳ ಹಿಂಡು

ರಾಜ್ಯದಲ್ಲಿ ಹೊಸ ಕೊರೋನಾ ತಡೆಗೆ ನೂತನ ಮಾರ್ಗಸೂಚಿ

ಇನ್ನೂ 10 ವರ್ಷ ಕೊರೋನಾ ನಮ್ಮ ಜತೆ ಇರಲಿದೆ- ಬಯೋಟೆಕ್ ಸಿಇಓ

ಮತ್ತಷ್ಟು ಸುದ್ದಿಗಳು

Latest News

ಗ್ಯಾಸ್ ಟ್ಯಾಂಕರ್- ಡೀಸೆಲ್ ಟ್ಯಾಂಕರ್ ಡಿಕ್ಕಿ: ತಪ್ಪಿದ ಅನಾಹುತ

newsics.com ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಸಮೀಪದ ಹೊಸ ಮಜಲು ಎಂಬಲ್ಲಿ ಅನಿಲ ಟ್ಯಾಂಕರ್ ಮತ್ತು ಡೀಸೆಲ್ ಟ್ಯಾಂಕರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಅನಿಲ...

ಸಹೋದರಿಯನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಚೂರಿಯಿಂದ ಇರಿತ

Newsics.com ನವದೆಹಲಿ: ಸಹೋದರಿಗೆ ಕಿರುಕುಳ ನೀಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ 17 ವರ್ಷ ಪ್ರಾಯದ ಹುಡುಗನಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದಿದ್ದಾರೆ. ಗಂಭೀರ ಹಲ್ಲೆ ನಡೆಸಿದ್ದಾರೆ. ದೆಹಲಿಯ ಕಲ್ಕಾಜಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ಬಾಲಕನ ಸ್ಥಿತಿ ಅತ್ಯಂತ...

20 ರೂಪಾಯಿ ದಕ್ಷಿಣೆ ಪಡೆದ ಮುಖ್ಯ ಅರ್ಚಕ ಅಮಾನತು

newsics.com ಕೊಚ್ಚಿ: ಕೇರಳದ ದೇವಸ್ಥಾನವೊಂದರಲ್ಲಿ 20 ರೂಪಾಯಿ ದಕ್ಷಿಣೆ ಪಡೆದ ಮುಖ್ಯ ಅರ್ಚಕರೊಬ್ಬರನ್ನು ಅಮಾನತು ಮಾಡಲಾಗಿದೆ. ದೇವಸ್ಥಾನ ಆಡಳಿತ ಮಂಡಳಿಯ ನೀತಿಗೆ  ವಿರುದ್ದವಾಗಿ ಅರ್ಚಕರು ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಕೊಚ್ಚಿ ಸಮೀಪದ ಮಾಚಾಡ್ ತಿರುವಣ್ಣಿಕಾವ್ ದೇವಸ್ಥಾನದಲ್ಲಿ...
- Advertisement -
error: Content is protected !!