newsics.com
ಟೆಹರಾನ್: ಇರಾನ್ ನಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ದಕ್ಷಿಣ ಇರಾನ್ ನಲ್ಲಿ ಭೂಕಂಪದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀ್ವ್ರತೆ 6ರಷ್ಟು ದಾಖಲಾಗಿದೆ. ಭಾರತೀಯ ಕಾಲಮಾನ ರಾತ್ರಿ ಮೂರು ಗಂಟೆಗೆ ಭೂಕಂಪನ ಸಂಭವಿಸಿದೆ
ಕತಾರ್, ಬೆಹರಿನ್ ನಲ್ಲಿ ಕೂಡ ಭೂಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ. ಇರಾನ್ ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಇದೀಗ ಮೂರು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ ಮೂಡಿದೆ.
ಭಾರತದಲ್ಲಿ ಕಳೆದ ಒಂದು ವಾರದಿಂದ ಸಣ್ಣ ಪ್ರಮಾಣದ ಭೂಕಂಪದ ಅನುಭವವಾಗಿದೆ. ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಒಂದು ವಾರದಲ್ಲಿ ಮೂರು ಬಾರಿ ಭೂಮಿ ಕಂಪಿಸಿದೆ