newsics.com
ನ್ಯೂಯಾರ್ಕ್ : ಕಚೇರಿಯ ಸಿಬ್ಬಂದಿ ಸೇರಿದಂತೆ 11 ಮಹಿಳೆಯರ ಜತೆ ಅನುಚಿತವಾಗಿ ವರ್ತಿಸಿದ ಆರೋಪಕ್ಕೆ ಗುರಿಯಾಗಿರುವ ನ್ಯೂಯಾರ್ಕ್ ಗವರ್ನರ್ ಆ್ಯಂಡ್ರೂ ಕ್ಯೂಮೋ ರಾಜೀನಾಮೆ ನೀಡಿದ್ದಾರೆ.
ಈ ಸಂಬಂಧ ಅವರು ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದಾರೆ.
ಆರೋಪಗಳ ಬಗ್ಗೆ ತನಿಖೆ ನಡೆಸಲು ಆಂತರಿಕ ಸಮಿತಿ ರಚಿಸಲಾಗಿತ್ತು. ಸಮಿತಿಯ ವಿಚಾರಣೆಯಲ್ಲಿ ಆರೋಪ ಸಾಬೀತಾಗಿರುವ ಕಾರಣ ಗವರ್ನರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಮಹಿಳೆಯರಿಗೆ ಬಲವಂತದ ಚುಂಬನ, ಎದೆ ಭಾಗ ಸ್ಪರ್ಶ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಲಾಗಿತ್ತು.
ಕೊರೋನಾ ಮೂರನೆ ಅಲೆ ಆರಂಭದ ಭೀತಿ, ಮಕ್ಕಳಲ್ಲಿ ಪ್ರತಿದಿನ 60 ಸೋಂಕು ಪತ್ತೆ