newsics.com
ಬೀಜಿಂಗ್: ಬಹುರಾಷ್ಟ್ರೀಯ ಸಂಸ್ಥೆ ಆಲಿ ಬಾಬಾದ ಮ್ಯಾನೇಜರ್ ರೊಬ್ಬರನ್ನು ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ವಜಾ ಮಾಡಲಾಗಿದೆ. ಮಹಿಳಾ ಸಿಬ್ಬಂದಿಗೆ ಒತ್ತಡ ಹೇರಿ ವಿಪರೀತ ಮದ್ಯಪಾನ ಮಾಡಿಸಿದ ಪ್ರಕರಣಕ್ಕೆ ಸಂಬಂಧಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಮಾನಸಿಕ ಮತ್ತು ಲೈಂಗಿಕ ಕಿರುಕುಳ ಕುರಿತು ಮಹಿಳಾ ಸಿಬ್ಬಂದಿ ಸಾಮಾಜಿಕ ಜಾಲ ತಾಣದಲ್ಲಿ ಪ್ರಸ್ತಾಪಿಸಿದ್ದರು. ಕ್ಲೈಂಟ್ ಜತೆ ಸಮಯ ಕಳೆಯುವಂತೆ ನಿರ್ಬಂಧಿಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ವಜಾ ಮಾಡಿರುವ ಸಿಬ್ಬಂದಿಯನ್ನು ಮತ್ತೇ ಕೆಲಸಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಆಲಿಬಾಬಾ ಸಂಸ್ಥೆಯ ಸಿ ಇ ಒ ಸ್ಪಷ್ಟಪಡಿಸಿದ್ದಾರೆ.