newsics.com
ಸ್ಲೊವೇನಿಯ: ವಿಮಾ ಹಣ ಪಡೆಯುವುದಕ್ಕಾಗಿ ಗರಗಸದಿಂದ ತನ್ನ ಕೈಯ್ಯನ್ನೇ ಕತ್ತರಿಕೊಂಡಿದ್ದ ಮಹಿಳೆಯೊಬ್ಬರಿಗೆ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಸ್ಲೊವೇನಿಯಾದ ರಾಜಧಾನಿ ಲ್ಯುಬಿಜಾನದ ಜಿಲ್ಲಾ ನ್ಯಾಯಾಲಯ ಈ ತೀರ್ಪು ನೀಡಿದೆ. ಆಕೆಯ ಪ್ರಿಯಕರನಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಹಾಗೂ ಆತನ ತಂದೆಗೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ. ತಂದೆಯ ಜೈಲು ಶಿಕ್ಷೆಯನ್ನು ಅಮಾನತಿನಲ್ಲಿಡಲಾಗಿದೆ.
2019 ರಲ್ಲಿ ಜುಲಿಜಾ ಅಡ್ಲೆಸಿಕ್ (22) ಎಂಬ ಮಹಿಳೆ ತನ್ನ ಪ್ರಿಯಕರನೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾರೆ. ಕೈ ಕತ್ತರಿಸಿಕೊಳ್ಳುವುದಕ್ಕೂ ಒಂದು ವರ್ಷ ಮೊದಲು ಅವರು 5 ವಿವಿಧ ವಿಮಾ ಕಂಪನಿಗಳ ಪಾಲಿಸಿ ಪಡೆದುಕೊಂಡಿದ್ದರು. ಈ ಪ್ರಕಾರ, ಈಗ ಜುಲಿಜಾಗೆ ಒಂದು ಮಿಲಿಯ ಯುರೋ (ಸುಮಾರು 9 ಕೋಟಿ ರೂಪಾಯಿ)ಗಿಂತಲೂ ಹೆಚ್ಚಿನ ವಿಮಾ ಹಣ ಸಿಗಲಿದೆ. ಇದರ ಅರ್ಧ ಭಾಗದಷ್ಟು ಹಣ ತಕ್ಷಣ ಸಿಕ್ಕಿದೆ ಹಾಗೂ ಉಳಿದ ಹಣ ಪ್ರತಿ ತಿಂಗಳು ಕಂತುಗಳಲ್ಲಿ ಸಿಗಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವಿಮಾ ಹಣಕ್ಕಾಗಿ ಕೈ ಕತ್ತರಿಸಿಕೊಂಡಾಕೆಗೆ ಜೈಲು ಶಿಕ್ಷೆ!
Follow Us