Monday, April 12, 2021

ಭೂಮಿ ಮೇಲಿನ ಅತಿ ಆಳ ತಲುಪಿದ ಅಜ್ಜಿ ಈಕೆ!

ಕ್ಯಾಲಿಫೋರ್ನಿಯಾ: ಭೂಮಿ ಮೇಲಿನ ಅತಿ ಆಳದ ಜಾಗ ತಲುಪಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ನಾಸಾ ಗಗನಯಾತ್ರಿ ಕ್ಯಾಥರಿನ್ ಸುಲ್ಲಿವನ್ ಪಾತ್ರರಾಗಿದ್ದಾರೆ.
ಬಾಹ್ಯಾಕಾಶದಲ್ಲಿ ನಡೆದ ಮೊದಲ ಅಮೆರಿಕನ್ ಮಹಿಳೆ ಎಂಬ ಶ್ರೇಯಕ್ಕೆ ಪಾತ್ರರಾದ 37 ವರ್ಷಗಳ ಬಳಿಕ, ಭೂಮಿ ಮೇಲಿನ ಅತ್ಯಂತ ಆಳಕ್ಕೆ ಇಳಿದ ಮಹಿಳೆ ಎಂಬ ಹೆಗ್ಗಳಿಕೆಗೆ 68ರ ಕ್ಯಾಥರಿನ್ ಭಾಜನರಾಗಿದ್ದಾರೆ. ಸಮುದ್ರ ಮಟ್ಟದಿಂದ 35,000 ಅಡಿ ಆಳಕ್ಕೆ ಜಿಗಿದ ಅಮೆರಿಕದ ನಾಸಾ ಗಗನಯಾತ್ರಿ ಕ್ಯಾಥರಿನ್ ಸುಲ್ಲಿವನ್ ಜತೆ ಅವರೊಂದಿಗೆ ಸಹ ಪೈಲಟ್ ವಿಕ್ಟರ್‌ ವೆಸ್ಕೋವೋ ಜತೆಯಲ್ಲಿದ್ದರು. ಮಾರಿಯಾನಾ ಟ್ರೆಂಚ್‌ ಎಂಬಲ್ಲಿ ಇರುವ ಚಾಲೆಂಜರ್‌ ಡೀಪ್‌ ಎಂಬ ಭೂಮಿ ಮೇಲಿನ ಅತ್ಯಂತ ಆಳವಾದ ಈ ಜಾಗ ತಲುಪಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದೊಂದಿಗೆ ನಿರಂತರ ಸಂಪರ್ಕ ಕಾಪಾಡಿಕೊಂಡು ‘ಲಿಮಿಟಿಂಗ್ ಫ್ಯಾಕ್ಟರ್‌’ ಎಂಬ ವಿಶೇಷ ವಾಹನದಲ್ಲಿ ಸುಲ್ಲಿವನ್ ಸಾಗರದ ತಳ ಮುಟ್ಟಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

4 ಕೋಟಿ ರೂಪಾಯಿ ಹಣದೊಂದಿಗೆ ಪರಾರಿಯಾದ ಸೆಕ್ಯೂರಿಟಿ ಗಾರ್ಡ್

newsics.com ಚಂಢೀಗಢ: ಪಂಜಾಬಿನ ಚಂಢೀಗಢದಲ್ಲಿ ಬ್ಯಾಂಕ್ ಭದ್ರತಾ ಸಿಬ್ಬಂದಿಯೊಬ್ಬರು 4 ಕೋಟಿ 4 ಲಕ್ಷ ರೂಪಾಯಿ ಜತೆ ಪರಾರಿಯಾಗಿದ್ದಾರೆ. ಸೆಕ್ಟರ್ 34 ಎ ಯಲ್ಲಿ ಈ ಪ್ರಕರಣ...

ಅಪ್ರಾಪ್ತ ಬಾಲಕಿಗೆ ಚುಂಬನ: ಯುವಕನಿಗೆ ಒಂದು ವರ್ಷ ಜೈಲು

newsics.comಮುಂಬೈ: ಅಪ್ರಾಪ್ತ ಬಾಲಕಿಗೆ ಕಣ್ಣು ಹೊಡೆದಿದ್ದಲ್ಲದೆ ಚುಂಬಿಸಿದ್ದಕ್ಕಾಗಿ 20 ವರ್ಷದ ಯುವಕನಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ  ಮುಂಬೈ ವಿಶೇಷ ನ್ಯಾಯಾಲಯ...

ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ ಆತ್ಮಹತ್ಯೆ

newsics.comಬೆಂಗಳೂರು: ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ(41) ಆತ್ಮಹತ್ಯೆಗೆ ಶರಣಾಗಿದ್ದಾರೆ.ತಾಯಿಯ ಸಾವು, ಮಕ್ಕಳಿಲ್ಲವೆಂಬ, ಉದ್ಯೋಗವಿರಲಿಲ್ಲವೆಂಬ ಆತಂಕದಿಂದ ಮಾನಸಿಕ‌ ಖಿನ್ನತೆಗೊಳಗಾಗಿದ್ದ ಶಿಲ್ಪಾ ಡೆತ್ ನೋಟ್ ಬರೆದಿಟ್ಟು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ...
- Advertisement -
error: Content is protected !!