Monday, April 12, 2021

ನೌಕೆ- ಬೋಟ್ ಡಿಕ್ಕಿ, 14 ಮೀನುಗಾರರು ನಾಪತ್ತೆ

ಮನಿಲಾ: ಸರಕು ಸಾಗಣೆ ನೌಕೆ ಹಾಗೂ ಮೀನುಗಾರಿಕೆ ದೋಣಿ ನಡುವೆ ಡಿಕ್ಕಿಯಾಗಿ 14 ಮಂದಿ ನಾಪತ್ತೆಯಾಗಿದ್ದಾರೆ.
ದ್ವೀಪರಾಷ್ಟ್ರ ಫಿಲಿಪ್ಪೈನ್ಸ್‍ನ ಮಂಬುರಾವೋ ಕರಾವಳಿ ಪಟ್ಟಣದ ಬಳಿ ಈ ಘಟನೆ ಸಂಭವಿಸಿದೆ. ನಾಪತ್ತೆಯಾದ 14 ಮೀನುಗಾರರು ಜಲಸಮಾಧಿಯಾಗಿರಬಹುದೆಂದು ಶಂಕಿಸಲಾಗಿದೆ.
ಫಿಲಿಪ್ಪೈನ್ಸ್ ರಾಜಧಾನಿ ಮನಿಲಾ ನಗರದಿಂದ ದಕ್ಷಿಣ ಭಾಗದಲ್ಲಿರುವ ಮಿಂಡೊರೊ ಓಕ್ಸಿಡೆಂಟಲ್ ಪ್ರಾಂತ್ಯದ ಮಂಬುರಾವೋ ಪಟ್ಟಣದಿಂದ 27 ಕಿ.ಮೀ. ದೂರದ ಸಾಗರದಲ್ಲಿ ಈ ಘಟನೆ ಸಂಭವಿಸಿದೆ.
ನಾಪತ್ತೆಯಾದ ಮೀನುಗಾರರಿಗಾಗಿ ಫಿಲಿಪ್ಫೈನ್ಸ್ ಕರಾವಳಿ ರಕ್ಷಣೆ ಪಡೆ ಸಮುದ್ರದಲ್ಲಿ ತೀವ್ರ ಶೋಧ ಮುಂದುವರಿಸಿದೆ. ಆದರೆ ಸಮುದ್ರದಲ್ಲಿ ಭಾರೀ ಬಿರುಗಾಳಿಯ ಕಾರಣ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ಎಂವಿ. ವಿಯೆನ್ನಾ ವುಡ್ಸ್ ಎಂಬ ಸರಕು ಸಾಗಣೆ ನೌಕೆ ಮತ್ತು ಎಫ್‍ವಿ ಲಿಬರ್ಟಿ ಫೈವ್ ಹೆಸರಿನ ಫಿಶಿಂಗ್ ಬೋಟ್ ನಡುವೆ ಡಿಕ್ಕಿಯಾಗಿದೆ ಎಂದು ಫಿಲಿಪ್ಪೈನ್ಸ್ ಕೋಸ್ಟ್ ಗಾರ್ಡ್‍ನ ಉನ್ನತಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

4 ಕೋಟಿ ರೂಪಾಯಿ ಹಣದೊಂದಿಗೆ ಪರಾರಿಯಾದ ಸೆಕ್ಯೂರಿಟಿ ಗಾರ್ಡ್

newsics.com ಚಂಢೀಗಢ: ಪಂಜಾಬಿನ ಚಂಢೀಗಢದಲ್ಲಿ ಬ್ಯಾಂಕ್ ಭದ್ರತಾ ಸಿಬ್ಬಂದಿಯೊಬ್ಬರು 4 ಕೋಟಿ 4 ಲಕ್ಷ ರೂಪಾಯಿ ಜತೆ ಪರಾರಿಯಾಗಿದ್ದಾರೆ. ಸೆಕ್ಟರ್ 34 ಎ ಯಲ್ಲಿ ಈ ಪ್ರಕರಣ...

ಅಪ್ರಾಪ್ತ ಬಾಲಕಿಗೆ ಚುಂಬನ: ಯುವಕನಿಗೆ ಒಂದು ವರ್ಷ ಜೈಲು

newsics.comಮುಂಬೈ: ಅಪ್ರಾಪ್ತ ಬಾಲಕಿಗೆ ಕಣ್ಣು ಹೊಡೆದಿದ್ದಲ್ಲದೆ ಚುಂಬಿಸಿದ್ದಕ್ಕಾಗಿ 20 ವರ್ಷದ ಯುವಕನಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ  ಮುಂಬೈ ವಿಶೇಷ ನ್ಯಾಯಾಲಯ...

ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ ಆತ್ಮಹತ್ಯೆ

newsics.comಬೆಂಗಳೂರು: ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ(41) ಆತ್ಮಹತ್ಯೆಗೆ ಶರಣಾಗಿದ್ದಾರೆ.ತಾಯಿಯ ಸಾವು, ಮಕ್ಕಳಿಲ್ಲವೆಂಬ, ಉದ್ಯೋಗವಿರಲಿಲ್ಲವೆಂಬ ಆತಂಕದಿಂದ ಮಾನಸಿಕ‌ ಖಿನ್ನತೆಗೊಳಗಾಗಿದ್ದ ಶಿಲ್ಪಾ ಡೆತ್ ನೋಟ್ ಬರೆದಿಟ್ಟು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ...
- Advertisement -
error: Content is protected !!