newsics.com
ಜಪಾನ್: ಉತ್ತರ ಜಪಾನ್ ನ ಕರಾವಳಿಯಲ್ಲಿ ಪನಮಾಯಿನ್ ನೋಂದಾಯಿತ ಸರಕು ಸಾಗಣೆ ಹಡಗೊಂದು ಸಮುದ್ರ ಮಧ್ಯದಲ್ಲಿ ಮುರಿದು ಎರಡು ಭಾಗವಾಗಿದ್ದು, ತೈಲ ಸೋರಿಕೆಯಾಗಿದೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಸಿಬ್ಬಂದಿಯನ್ನು ಸುರಕ್ಷಿತವಾಗಿ ಕರೆತರಲಾಗಿದ್ದು, 24 ಕಿ.ಮೀವರಗೆ ಸೋರಿಕೆಯಾದ ತೈಲ ಹರಡಿದೆ ಎಂದು ವರದಿ ತಿಳಿಸಿದೆ.
39,910-ಟನ್ ತೂಕದ “ಕ್ರಿಮ್ಸನ್ ಪೋಲಾರಿಸ್” ಹಡಗು ಮುರಿದಿದ್ದು ತೈಲ ಸೋರಿಕೆಯನ್ನು ನಿಯಂತ್ರಿಸಲಾಗುತ್ತಿದೆ ಎಂದು ಜಪಾನ್ ಕೋಸ್ಟ್ ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.