newsics.com
ಚಿಕಾಗೋ: ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ ನಡೆದಿದೆ. ಚಿಕಾಗೋ ನಗರದ ಹೊರ ವಲಯದಲ್ಲಿ ಯುವಕನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಆರು ಮಂದಿ ಮೃತಪಟ್ಟಿದ್ದು, 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಯ ಪರೇಡ್ ನಡೆಯುತ್ತಿದ್ದ ವೇಳೆ ಹತ್ತಿರದಲ್ಲಿದ್ದ ಕಟ್ಟಡದ ಛಾವಣಿಯಿಂದ ಶಂಕಿತ ಆರೋಪಿ ರಾಬರ್ಟ್ ಕ್ರಿಮೋ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿ ರಾಬರ್ಟ್ ಕ್ರಿಮೋ ನನ್ನು ಇದೀಗ ಬಂಧಿಸಲಾಗಿದೆ