ವಾಷಿಂಗ್ಟನ್: ಕೇವಲ ಮಧ್ಯಪ್ರಾಚ್ಯ ಮಾತ್ರವಲ್ಲ, ದೂರದ ಲಂಡನ್ ಮತ್ತು ದೆಹಲಿಯಲ್ಲಿನ ವಿಧ್ವಂಸಕ ಕೃತ್ಯಗಳಲ್ಲಿಯೂ ಇರಾನ್ ಕಮಾಂಡರ್ ಸೊಲಿಮನಿ ಪಾತ್ರ ವಹಿಸಿದ್ದಾನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಫ್ ಆರೋಪಿಸಿದ್ದಾರೆ. ಇದೇ ವೇಳೆ ಅಮೆರಿಕದ ಸೇನಾ ಕಾರ್ಯಾಚರಣೆಯನ್ನು ಟ್ರಂಫ್ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಈ ಬೆಳವಣಿಗೆಗಳ ಮಧ್ಯೆ ಉದ್ವಿಗ್ನ ಸ್ಥಿತಿ ನೆಲೆಸಿರುವ ಮಧ್ಯ ಪ್ರಾಚ್ಯಕ್ಕೆ ಅಮೆರಿಕ 3000 ಹೆಚ್ಚುವರಿ ಸೇನಾ ಪಡೆ ರವಾನಿಸಿದೆ.