Wednesday, July 6, 2022

ಭಾರತೀಯರ ಕ್ಷಮೆ ಕೋರಿದ ಇಸ್ರೇಲ್ ಪ್ರಧಾನಿ ಪುತ್ರ

Follow Us

ಜೆರುಸೆಲಂ: ಭಾರತೀಯ ಹಿಂದುಗಳ ಧಾರ್ಮಿಕ ಭಾವನೆಗೆ ಅವಮಾನ ಮಾಡಿದ್ದ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೇತನ್ಯಾಹು ಅವರ ಹಿರಿಯ ಪುತ್ರ ಯೇರ್ ನೇತನ್ಯಾಹು ಭಾರತೀಯರ ಕ್ಷಮೆ ಕೇಳಿದ್ದಾರೆ.
‘ಜೈ ಹಿಂದ್…ನಾನು ಭಾರತವನ್ನು ಪ್ರೀತಿಸುತ್ತೇನೆ’ ಎಂದು ಟ್ವಿಟರ್ ನಲ್ಲಿ ಕ್ಷಮೆ ಕೋರಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಜು.26ರಂದು ಒಂದು ಮೆಮೆಯನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು. ದುರ್ಗಾಮಾತೆಯ ದೇಹಕ್ಕೆ ತನ್ನ ತಂದೆ ಬೆಂಜಮಿನ್ ನೇತನ್ಯಾಹು ವಿರುದ್ಧ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿರುವ ಪ್ರಾಸಿಕ್ಯೂಟರ್ ಲಿಯಾಟ್ ಬೆನ್ ಅರಿ ಅವರ ಫೋಟೊವನ್ನು ಅಳವಡಿಸಲಾಗಿತ್ತು. ದುರ್ಗಾ ದೇವಿಯ ಹಲವು ಕೈಗಳಲ್ಲಿ ಮಧ್ಯದ ಬೆರಳು (ಇದು ಅಶ್ಲೀಲ ಸಂಕೇತ) ಎತ್ತಿ ಹಿಡಿದಂತೆ ಈ ಮೆಮೆಯಲ್ಲಿ ಚಿತ್ರಿಸಲಾಗಿತ್ತು. ಇದನ್ನು ನೋಡಿದ ಭಾರತೀಯರು ಟ್ವೀಟ್ ಮೂಲಕ ತಮ್ಮ ಕೋಪ ಹೊರಹಾಕಿದ್ದರು.
ಇದನ್ನು ಗಮನಿಸಿದ ಯೇರ್ ನೇತನ್ಯಾಹು ಕೂಡಲೇ ಕ್ಷಮೆ ಕೇಳಿದ್ದಾರೆ. ದಯವಿಟ್ಟು ಕ್ಷಮಿಸಿ, ಇಸ್ರೇಲ್ ನ ಕೆಲವು ರಾಜಕೀಯ ವ್ಯಕ್ತಿಗಳನ್ನು ಟೀಕಿಸಲು ಈ ಮೆಮೆ ಹಾಕಿದ್ದೆ. ಇದು ಭಾರತೀಯರ ದೇವಿಯ ಚಿತ್ರವೆಂದಾಗಲಿ, ಹಿಂದು ದೇವಿಯೆಂದಾಗಲಿ ನನಗೆ ತಿಳಿದಿರಲಿಲ್ಲ. ಟ್ವೀಟ್ ಮಾಡಿದ ಮೇಲೆ ಕೆಲವು ಕಾಮೆಂಟ್ಗಳನ್ನು ನೋಡಿದೆ. ಹಾಗಾಗಿ ನನಗೆ ನನ್ನ ತಪ್ಪಿನ ಅರ್ಥವಾಯಿತು. ಕೂಡಲೇ ಅದನ್ನು ಡಿಲೀಟ್ ಮಾಡಿದ್ದೇನೆ. ನನ್ನ ಎಲ್ಲ ಹಿಂದೂ ಸ್ನೇಹಿತರ ಬಳಿ ಕ್ಷಮೆ ಯಾಚನೆ ಮಾಡುತ್ತಿದ್ದೇನೆ ಎಂದು ಯೇರ್ ಜು.27ರಂದು ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಒಟಿಪಿ ನೀಡುವ ವಿಷಯಕ್ಕೆ ಜಗಳ: ಪ್ರಯಾಣಿಕನ ಹತ್ಯೆ ಮಾಡಿದ ಕ್ಯಾಬ್ ಚಾಲಕ

newsics.com ಚೆನ್ನೈ: ಕಾರನ್ನು ಬಾಡಿಗೆಗೆ ನಿಗದಿಪಡಿಸಿ ಪ್ರಯಾಣ ಆರಂಭಿಸುವ ಮೊದಲು ಒಟಿಪಿ ನೀಡುವ ಜಗಳ ಪ್ರಯಾಣಿಕನ ಕೊಲೆಯಲ್ಲಿ ಅಂತ್ಯವಾಗಿದೆ. ಚೆನ್ನೈ ನಗರದ ನವಲೂರಿನಲ್ಲಿ ಈ...

ದೇಶದಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು, 28 ಜನರ ಸಾವು

newsics.com ನವದೆಹಲಿ:  ದೇಶದಲ್ಲಿ ಕೊರೋನಾದ ಹಾವಳಿ ಮುಂದುವರಿದಿದೆ.  ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ ಕೊರೋನಾ ಸೋಂಕಿತರಾಗಿದ್ದ 15,394 ಮಂದಿ ಗುಣಮುಖರಾಗಿದ್ದಾರೆ. ಕೊರೋನಾದಿಂದ ಕಳೆದ 24 ಗಂಟೆ...

ಆದಾಯ ತೆರಿಗೆ ವಂಚನೆ : ಡೋಲೋ ಮಾತ್ರೆ ಕಚೇರಿ ಮೇಲೆ ದೇಶವ್ಯಾಪಿ ದಾಳಿ

newsics.com ಬೆಂಗಳೂರು: ಆದಾಯ ತೆರಿಗೆ ವಂಚಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ಮಾತ್ರೆ ತಯಾರಕ ಸಂಸ್ಥೆ ಡೋಲೋ ಮುಖ್ಯ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೇಶದ ಹಲವು ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವ...
- Advertisement -
error: Content is protected !!