ವಾಶಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಮತ್ತು ಖಾಸಗಿ ಬಾಹ್ಯಾಕಾಶ ಕಂಪನಿ ‘ಸ್ಪೇಸ್ಎಕ್ಸ್’ ಜಂಟಿಯಾಗಿ ಕೈಗೊಂಡಿದ್ದ ಬಾಹ್ಯಾಕಾಶ ನೌಕೆ ಮೆಕ್ಸಿಕೊ ಕೊಲ್ಲಿಯಲ್ಲಿ ನೀರಿನ ಮೇಲೆ ಇಳಿದಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿದ್ದ ಅಮೆರಿಕದ ಮೊದಲ ಸಿಬ್ಬಂದಿಸಹಿತ ಬಾಹ್ಯಾಕಾಶ ನೌಕೆ ‘ಕ್ರೂ ಡ್ರ್ಯಾಗನ್ ಎಂಡವರ್’ ಭಾನುವಾರ ಸುರಕ್ಷಿತವಾಗಿ ಭೂಮಿಗೆ ಮರಳಿದೆ. ಬಾಹ್ಯಾಕಾಶ ನೌಕೆಯು ಗಂಟೆಗೆ ಸುಮಾರು 28,000 ಕಿ.ಮೀ. ವೇಗದಲ್ಲಿ ಭೂಮಿಯ ವಾತಾವರಣವನ್ನು ಪ್ರವೇಶಿಸಿದಾಗ ಅದರ ಉಷ್ಣತೆಯು 1900 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಭೂಮಿಯ ವಾತಾವರಣದಲ್ಲಿ ಚಲಿಸುವಾಗ ನೌಕೆಯ 4 ಪ್ಯಾರಾಶೂಟ್ಗಳನ್ನು ನಿಯೋಜಿಸಲಾಯಿತು. ಅಂತಿಮವಾಗಿ ಅದು ಮೆಕ್ಸಿಕೊ ಕೊಲ್ಲಿಯ ಮೇಲೆ ಇಳಿಯುವಾಗ ಅದರ ವೇಗ ಗಂಟೆಗೆ 24 ಕಿ.ಮೀ.ಗೆ ಇಳಿದಿತ್ತು.
ಕೊರೋನಾ; ಭಾರತದ ವಿಮಾನಗಳಿಗೆ ನಿಷೇಧ ಹೇರಿದ ಕುವೈತ್
ಈ ಮೂಲಕ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ಮತ್ತು ಅಲ್ಲಿಂದ ಹಿಂದಕ್ಕೆ ತರುವ ಸಾಮರ್ಥ್ಯ ಅಮೆರಿಕಕ್ಕೆ ಮತ್ತೊಮ್ಮೆ ಬಂದಿದೆ ಎನ್ನುವುದನ್ನು ಸಾಬೀತುಪಡಿಸಿದೆ. ಅಮೆರಿಕದ ನೆಲದಿಂದ ಗಗನಯಾನಿಗಳನ್ನು ಹೊತ್ತು ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿದ ಮತ್ತು ಅಲ್ಲಿಂದ ಸುರಕ್ಷಿತವಾಗಿ ಭೂಮಿಗೆ ಕರೆತಂದ ಮೊದಲ ಬಾಹ್ಯಾಕಾಶ ನೌಕೆ ಇದಾಗಿದೆ. ಗಗನಯಾತ್ರಿಗಳಾದ ಡೌಗ್ ಹರ್ಲೇ ಮತ್ತು ಬಾಬ್ ಬೆಹಂಕನ್ರನ್ನು ಹೊತ್ತ ‘ಕ್ರೂ ಡ್ರ್ಯಾಗನ್ ಎಂಡವರ್’ ನೌಕೆಯು ಜಲಸ್ಪರ್ಶ ಮಾಡುತ್ತಲೇ, ಆ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ರಕ್ಷಣಾ ಹಡಗುಗಳು ಅದರತ್ತ ಧಾವಿಸಿದವು. ಒಂದು ಹಡಗು ತನ್ನ ಕ್ರೇನ್ ಮೂಲಕ ತೇಲುತ್ತಿದ್ದ ಬಾಹ್ಯಾಕಾಶ ನೌಕೆಯನ್ನು ತುಂಬಿಕೊಂಡಿತು. ಜಲಸ್ಪರ್ಶದ 1 ಗಂಟೆ ಬಳಿಕ ಗಗನಯಾನಿಗಳು ಬಾಹ್ಯಾಕಾಶ ನೌಕೆಯಿಂದ ಹೊರಬಂದು ಹೆಲಿಕಾಪ್ಟರ್ ಮೂಲಕ ತೀರ ತಲುಪಿದರು. ಬಳಿಕ ಅವರು ವಿಮಾನದ ಮೂಲಕ ಹ್ಯೂಸ್ಟನ್ಗೆ ತೆರಳಿದರು.
ಚಿನ್ನದ ದರ ಗಗನಕ್ಕೆ; ಬೇಡಿಕೆ ಪಾತಾಳಕ್ಕೆ