Tuesday, April 13, 2021

ಕೊರೋನಾ ಗಾಳಿಯಿಂದಲೂ ಹರಡುವ ಭೀತಿ: ಗಮನಹರಿಸಲು ವಿಜ್ಞಾನಿಗಳ ಆಗ್ರಹ

ನ್ಯೂಯಾರ್ಕ್: ಮಾರಕ ಕೊರೋನಾ ಗಾಳಿಯಿಂದಲೂ ಹರಡುವ ಭೀತಿಯನ್ನು 239 ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. 23 ದೇಶಗಳ ಈ ವಿಜ್ಞಾನಿಗಳು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ  ಹೆಚ್ಚಿನ ಗಮನ ಹರಿಸಬೇಕು ಎಂದು ವಿಜ್ಞಾನಿಗಳು ಮನವಿ ಮಾಡಿದ್ದಾರೆ.

ಕೊರೋನಾ ಗಾಳಿಯಿಂದ ಬಿಲ್ ಕುಲ್  ಹರಡುವುದಿಲ್ಲ. ಬದಲಾಗಿ ಸಂಪರ್ಕದಿಂದ ಮಾತ್ರ ಹರಡುತ್ತಿದೆ ಎಂಬುದು ಇತ್ತೀಚಿನವರೆಗಿನ ವೈಜ್ಞಾನಿಕ ಮಾಹಿತಿ. ಆದರೆ ಹಲವು ಹಂತಗಳಲ್ಲಿ ಕೊರೋನಾ ವೈರಸ್ ತನ್ನ ಸ್ವರೂಪ ಬದಲಾಯಿಸಿಕೊಂಡಿದೆ ಎಂಬುದನ್ನು ವಿಜ್ಞಾನಿಗಳು ದೃಢಪಡಿಸಿದ್ದಾರೆ.

ಗಾಳಿಯಿಂದ ಕೊರೋನಾ ಹರಡುವುದು ಖಚಿತವಾದರೆ ಅದು ವಿಶ್ವದಲ್ಲಿ ಸಾವಿನ ಸರಮಾಲೆಯನ್ನೇ ಸೃಷ್ಟಿಸಲಿದೆ. ಸೈನ್ಸ್  ಜರ್ನಲ್ ನಲ್ಲಿ  ಪ್ರಕಟವಾದ ಸಂಶೋಧನಾ ಲೇಖನದಲ್ಲಿ ವಿಜ್ಞಾನಿಗಳು ಕೊರೋನಾ ಗಾಳಿಯಿಂದ ಹರಡುವ ಸಾಧ್ಯತೆ ಬಗ್ಗೆ ಭೀತಿ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಚಿಕಿತ್ಸೆ ನಿರಾಕರಿಸಿದ ಮಲ್ಯ ಆಸ್ಪತ್ರೆ, ಫುಟ್’ಪಾತ್’ನಲ್ಲೇ 8 ಗಂಟೆ ಕಳೆದ ಕೊರೋನಾ ಸೋಂಕಿತೆ

newsics.comಬೆಂಗಳೂರು: ಡಯಾಲಿಸಿಸ್‌ಗೆ ಬಂದ‌ ಮಹಿಳೆಗೆ ಕೊರೋನಾ ಸೋಂಕಿದೆ ಎಂದು ಮಲ್ಯ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿದ್ದರಿಂದ ಆ ಮಹಿಳೆ ಪುಟ್'ಪಾತ್'ನಲ್ಲೇ ಎಂಟು ಗಂಟೆ ಕಳೆದಿದ್ದಾರೆ.ಬಸವನಗುಡಿ...

ಮೀನುಗಾರಿಕಾ ಬೋಟ್ ದುರಂತ: ಇಬ್ಬರ ಸಾವು, 12 ಮೀನುಗಾರರು ನಾಪತ್ತೆ

newsics.comಮಂಗಳೂರು(ದಕ್ಷಿಣ ಕನ್ನಡ): ಮೀನುಗಾರಿಕಾ ಬೋಟ್ ದುರಂತದಲ್ಲಿ  ಇಬ್ಬರು ಸಾವನ್ನಪ್ಪಿದ್ದು, 12 ಮೀನುಗಾರರು ನಾಪತ್ತೆಯಾಗಿರುವ ಘಟನೆ ಮಂಗಳೂರು ಬಂದರಿನಲ್ಲಿ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲಿ ದೂರದಲ್ಲಿ...

ಭಾರತದಲ್ಲಿ ಈ ಬಾರಿ ಕೂಡ ಸಾಮಾನ್ಯ ಮುಂಗಾರು: ಸ್ಕೈಮೆಟ್ ಭವಿಷ್ಯ

newsics.com ಪುಣೆ: ಸತತ ಮೂರನೆ ವರ್ಷ ಕೂಡ ಭಾರತದಲ್ಲಿ  ಸಾಮಾನ್ಯ ಮುಂಗಾರು ಮಳೆ ಸುರಿಯಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈ ಮೆಟ್ ಭವಿಷ್ಯ ನುಡಿದಿದೆ. ಜೂನ್ ನಿಂದ ಆರಂಭವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಕೊನೆಗೊಳ್ಳುವ ಮುಂಗಾರು...
- Advertisement -
error: Content is protected !!