newsics.com
ಹೈಟಿ: ಹೈಟಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 304 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ನಿನ್ನೆ ಹೈಟಿಯಲ್ಲಿ 7.2ರಷ್ಟು ತೀವ್ರ ಭೂಕಂಪ ಸಂಭವಿಸಿದ್ದು, ನೂರಾರು ಮನೆಗಳು ಸಂಪೂರ್ಣ ನೆಲಸಮವಾಗಿವೆ.
ಸುನಾಮಿ ಸಂಭವಿಸಬಹುದಾದ ಸಾಧ್ಯತೆಯನ್ನು ತಜ್ಞರು ಉಲ್ಲೇಖಿಸಿದ್ದು, ಎಚ್ಚರಿಕೆ ನೀಡಲಾಗಿದೆ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಟ್ವೀಟ್ ಮಾಡಿದ್ದು, ಹೈಟಿ ದೇಶದ ಜನರೊಂದಿಗೆ ನಾವಿದ್ದೇವೆ, ಎಲ್ಲಾ ಬೆಂಬಲ, ತುರ್ತು ವೈದ್ಯಕೀಯ ಸಹಾಯವನ್ನು ಒದಗಿಸಲಾಗುತ್ತದೆ ಎಂದಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಒಂದು ತಿಂಗಳ ಕಾಲ ಹೈಟಿಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.