newsics.com
ಕಠ್ಮಂಡು: ನೇಪಾಳದಲ್ಲಿ 20 ಸಚಿವರ ನೇಮಕ ಅಸಿಂಧು ಎಂದ ಸುಪ್ರೀಂ ಕೋರ್ಟ್; ನೇಪಾಳ ರಾಜಕೀಯ ಬಿಕ್ಕಟ್ಟು ಮತ್ತಷ್ಟು ಜಟಿಲ ಉಂಟಾಹಿರುವ ರಾಜಕೀಯ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ.
ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರು 20 ಸಚಿವರನ್ನು ನೇಮಕ ಮಾಡಿರುವುದು ಅಸಾಂವಿಧಾನಿಕ ಎಂದು ನೇಪಾಳ ಸುಪ್ರೀಂಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ಮುಖ್ಯ ನ್ಯಾಯಮೂರ್ತಿ ಚೋಳೇಂದ್ರ ಶಂಷೇರ್ ರಾಣಾ ಹಾಗೂ ನ್ಯಾಯಮೂರ್ತಿ ಪ್ರಕಾಶಕುಮಾರ್ ಧುಂಗಾನಾ ಅವರಿರುವ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಇದರೊಂದಿಗೆ ಸಂಸತ್ ವಿಸರ್ಜನೆಗೊಳಿಸಿದ ನಂತರ ಪ್ರಧಾನಿ ಒಲಿ ಅವರು ಎರಡು ಬಾರಿ ಮಾಡಿದ್ದ ಸಂಪುಟ ವಿಸ್ತರಣೆ ಅಸಿಂಧುಗೊಂಡಂತಾಗಿದೆ.
ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಪ್ರಧಾನಿ ಒಲಿ ಸೇರಿದಂತೆ ಐವರು ಸಚಿವರು ಮಾತ್ರ ಸಂಪುಟದಲ್ಲಿ ಉಳಿದುಕೊಂಡಿದ್ದಾರೆ. ಇಬ್ಬರು ಉಪ ಪ್ರಧಾನಿಗಳಾದ ರಾಜೇಂದ್ರ ಮಹತೊ (ಜನತಾ ಸಮಾಜವಾದಿ ಪಾರ್ಟಿ) ಹಾಗೂ ರಘುವೀರ್ ಮಹಾಸೇಠ್ (ಪ್ರಧಾನಿ ಒಲಿ ನೇತೃತ್ವದ ಸಿಪಿಎನ್–ಯುಎಂಎಲ್ ಪಾರ್ಟಿ) ಅಧಿಕಾರ ಕಳೆದುಕೊಂಡಿದ್ದಾರೆ.
ಸೆಪ್ಟೆಂಬರ್’ನಲ್ಲಿ 2 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ: ಏಮ್ಸ್ ಮುಖ್ಯಸ್ಥ ವಿಶ್ವಾಸ