NEWSICS.COM
ಲಂಡನ್: ರೂಪಾಂತರ ಕೊರೋನಾ ವೈರಸ್’ನಿಂದ ಆತಂಕ ಹೆಚ್ಚಿದೆ. ವಿದೇಶದಿಂದ ಆಗಮಿಸುವವರಲ್ಲಿ ಕೊರೋನಾ ಪಾಸಿಟಿವ್ ಬಂದಿರುವುದು ಇನ್ನಷ್ಟು ಭಯಕ್ಕೆ ಕಾರಣವಾಗಿದೆ.
ಇದರ ಮಧ್ಯೆ ಹೊಸ ಕೊರೋನಾದ ಪ್ರಮುಖ ಲಕ್ಷಣಗಳನ್ನು ತಜ್ಞರು ಕಂಡುಕೊಂಡಿದ್ದಾರೆ.
ಮುಖ್ಯವಾಗಿ ಗೊಂದಲ, ನಿರಂತರ ಎದೆ ನೋವು, ಜ್ವರ ಒಣ ಕೆಮ್ಮು ಸೇರಿದಂತೆ ಗಂಟಲು ಕೆರತ, ಸ್ರವಿಸುವ ಮೂಗು ಮತ್ತು ಉಸಿರಾಟದ ತೊಂದರೆ, ಆಯಾಸ, ಜಠರಕರುಳಿನ ಸೋಂಕು, ವಾಸನೆ ಮತ್ತು ರುಚಿಯ ಪ್ರಜ್ಞೆ ಇಲ್ಲದಿರುವುದು, ನೀಲಿ ತುಟಿಗಳು ಅಥವಾ ಮುಖ ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಟಿಸಿದ್ದು, ರೂಪಾಂತರಿತ ವೈರಸ್ ಹೆಚ್ಚು ಅಪಯಕಾರಿ ಮತ್ತು ಹೆಚ್ಚಿನ ವೇಗದಲ್ಲಿ ಹರಡುವ ಸಾಮರ್ಥ್ಯವನ್ನು ಹೊಂದಿದೆ ಎಂದಿದೆ. ಆದ್ದರಿಂದ ಹೆಚ್ಚಿನ ಮುತುವರ್ಜಿ ವಹಿಸುವುದು ಅಗತ್ಯವಾಗಿದೆ.
ರೋಗಲಕ್ಷಣಗಳು ಕಾಣಿಸಿಕೊಂಡಾಗ ಮತ್ತು ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ಇದಲ್ಲದೆ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಬೇಕು ಎಂದಿದೆ. ಲಂಡನ್ ಸ್ಕೂಲ್ ಆಫ್ ಹೈಜೀನ್ ಅಂಡ್ ಟ್ರಾಪಿಕಲ್ ಮೆಡಿಸಿನ್ನಲ್ಲಿ ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ, ರೂಪಾಂತರಿ ಕೊರೋನಾದಿಂದ 2020 ಕ್ಕೆ ಹೋಲಿಸಿದರೆ 2021 ರಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಬಹುದು ಅದೇ ರೀತಿ ಸಾವಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.