Wednesday, January 27, 2021

ಸಮರಾಭ್ಯಾಸದ ಮೂಲಕ ಚೀನಾಗೆ ತೈವಾನ್ ಎಚ್ಚರಿಕೆ

ತೈಚುಂಗ್‌(ತೈವಾನ್): ಭಾರೀ ಸಮರಾಭ್ಯಾಸದ ಮೂಲಕ ತೈವಾನ್ ಚೀನಾಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಈ ಸಮರಾಭ್ಯಾಸ ನಾಳೆ (ಜುಲೈ 17) ಕೊನೆಗೊಳ್ಳಲಿದೆ.
ಚೀನಾ ಹಾಗೂ ತೈವಾನ್‌ ನಡುವಿನ ಪರಿಸ್ಥಿತಿ ದಿನೇ ದಿನೇ ಮತ್ತಷ್ಟು ಬಿಗಡಾಯಿಸುತ್ತಿರುವ ಈ ಸನ್ನಿವೇಶದಲ್ಲಿ ಈ ಸಮರಾಭ್ಯಾಸ ಭಾರೀ ಮಹತ್ವ ಪಡೆದುಕೊಂಡಿದೆ. ಸಮರಾಭ್ಯಾಸದ ಮೂಲಕ ಗುರುವಾರ ತೈವಾನ್ ತನ್ನ ಶಕ್ತಿ ಪ್ರದರ್ಶಿಸಿದೆ.

ಶುದ್ಧ ಇಂಧನ ಬಳಕೆಗೆ ಉತ್ತೇಜನ ಪ್ರಸ್ತಾಪ: ಜೋ ಬಿಡೆನ್ ಹೇಳಿಕೆಗೆ ಭಾರೀ ಮೆಚ್ಚುಗೆ

ಚೀನಾದತ್ತ ಮುಖ ಮಾಡಿರುವ ತೈಚುಂಗ್‌ನ ದ್ವೀಪವೊಂದರ ಕಡಲ ತೀರದ ಬಳಿ ತೈವಾನ್‌ ಸೇನೆಯು ಸಮರಾಭ್ಯಾಸ ನಡೆಸಿದ್ದು, ಈ ವೇಳೆ ಯುದ್ಧ ವಿಮಾನಗಳು ಸಮುದ್ರಕ್ಕೆ ಗುಂಡು ಮತ್ತು ಬಾಂಬ್‌ ಹಾಕಿದವು. ಹೆಲಿಕಾಫ್ಟರ್‌ ಮೂಲಕ ನೀರಿಗೆ ಕ್ಷಿಪಣಿ ಉಡಾಯಿಸಲಾಯಿತು.
‘ನಾವು ನಮ್ಮ ದೇಶ ರಕ್ಷಿಸುವಲ್ಲಿ ಸಮರ್ಥರಾಗಿದ್ದೇವೆ ಎಂಬುದನ್ನು ಜಗತ್ತಿಗೆ ಪ್ರಚುರಪಡಿಸುವುದು ಈ ಸಮರಾಭ್ಯಾಸದ ಪ್ರಮುಖ ಗುರಿಯಾಗಿದೆ’ ಎಂದು ತೈವಾನ್‌ ಅಧ್ಯಕ್ಷ ತ್ಸೈ ಇಂಗ್-ವೆನ್ ಹೇಳಿದ್ದಾರೆ.
ತೈವಾನ್‌ ಅನ್ನು ಚೀನಾ ತನ್ನ ಭೂಪ್ರದೇಶದ ಭಾಗ ಎಂದು ಪ್ರತಿಪಾದಿಸುತ್ತಿದೆ. ಆದರೆ 160 ಕಿ.ಮೀ. ಭೂಪ್ರದೇಶ ಹೊಂದಿರುವ ತೈವಾನ್‌ ತನ್ನದೇ ಆದ ಸರ್ಕಾರ ಹೊಂದಿದ್ದು, 2.40 ಕೋಟಿ ಜನರು ಇಲ್ಲಿ ವಾಸಿಸುತ್ತಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಕೊರೋನಾ ಸೋಂಕಿತರಾಗಿದ್ದ ಶೇಕಡ 96.91 ಮಂದಿ ಗುಣಮುಖ

Newsics.com ನವದೆಹಲಿ: ದೇಶದಲ್ಲಿ ಕೊರೋನಾದ  ಅಬ್ಬರ ಇಳಿಮುಖವಾಗುತ್ತಿದೆ.ಕಳೆದ  24 ಗಂಟೆಯಲ್ಲಿ   12, 689  ಮಂದಿಯಲ್ಲಿ  ಕೊರೋನಾ ಸೋಂಕು ದೃಢಪಟ್ಟಿದೆ.  ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,06.89, 527...

ಕೊರೋನಾ ಸೃಷ್ಟಿಸಿದ್ದು ಶಿವನಂತೆ: ಇಬ್ಬರು ಮಕ್ಕಳನ್ನು ಕೊಂದ ತಾಯಿಯ ಹುಚ್ಚು ಹೇಳಿಕೆ

Newsics.com ತಿರುಪತಿ: ಮೂಢನಂಬಿಕೆಗೆ ಜೋತುಬಿದ್ದು ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕೊಂದ ತಾಯಿ ಪದ್ಮಜ ಇದೀಗ ಹುಚ್ಚು ಹೇಳಿಕೆ ನೀಡುತ್ತಿದ್ದಾರೆ. ಈಗಲೂ ಕೂಡ ಸಾಮಾನ್ಯ ಸ್ಥಿತಿಗೆ ಮರಳದಿರುವ ಪದ್ಮಜ, ಹುಚ್ಚರಂತೆ ವರ್ತಿಸುತ್ತಿದ್ದಾರೆ. ಕೊರೋನಾ ಚೀನಾದಲ್ಲಿ ಸೃಷ್ಟಿಯಾಗಿಲ್ಲ....

ದೆಹಲಿ ಹಿಂಸಾಚಾರದಲ್ಲಿ 300 ಪೊಲೀಸರಿಗೆ ಗಾಯ

Newsics.com ನವದೆಹಲಿ: ಮಂಗಳವಾರ ದೆಹಲಿಯಲ್ಲಿ ರೈತರ ದಾಳಿಯಿಂದ 300 ಪೊಲೀಸರು ಗಾಯಗೊಂಡಿದ್ದಾರೆ ಎಂದು ದೆಹಲಿ ಪೊಲೀಸ್ ಇಲಾಖೆ ಹೇಳಿದೆ. ರೈತರು ಆಕ್ರೋಶದಿಂದ ಪೊಲೀಸರನ್ನು ಗುರಿಯಾಗಿರಿಸಿ ದಾಳಿ ನಡೆಸಿದ್ದಾರೆ. ಚೂಪಾದ ವಸ್ತುಗಳಿಂದ ಹಲ್ಲೆ ನಡೆಸಿದ್ದಾರೆ  ಎಂದು...
- Advertisement -
error: Content is protected !!