newsics.com
ಕಾಬೂಲ್: ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಜಾರಿಗೆ ಬಂದ ಬಳಿಕ ಅಲ್ಲಿ ಎಲ್ಲ ವಿಧದ ಮನೋರಂಜನಾ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಲಾಗಿದೆ. ಇದರಲ್ಲಿ ಸಂಗೀತ ಮತ್ತು ನೃತ್ಯ ಕೂಡ ಸೇರಿದೆ.
ತಾಲಿಬಾನ್ ಉಗ್ರರು ಅಪ್ಘಾನಿಸ್ತಾನದ ಪಕಿತಾ ಪ್ರಾಂತ್ಯದಲ್ಲಿ ಸಂಗೀತ ಉಪಕರಣಗಳನ್ನು ನಾಶಪಡಿಸುತ್ತಿರುವ ಚಿತ್ರ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಕಲಾವಿದನ ಕಣ್ಣಮುಂದೆಯೇ ತಾಲಿಬಾನ್ ಉಗ್ರರು ಸಂಗೀತ ಉಪಕರಣಗಳನ್ನು ಧ್ವಂಸ ಮಾಡುತ್ತಿದ್ದಾರೆ . ಇದನ್ನು ನೋಡಿ ಕಲಾವಿದ ಕಣ್ಣೀರು ಸುರಿಸುತ್ತಿರುವ ದೃಶ್ಯ ಇದೀಗ ವೈರಲ್ ಆಗಿದೆ.