newsics.com
ಅಫ್ಘಾನಿಸ್ತಾನ: ತಾಲಿಬಾನ್ ಉಗ್ರರ ಕೈಗೆ ಸಿಲುಕಿ ಅಫ್ಘಾನಿಸ್ತಾನ ನಲುಗಿಹೋಗುತ್ತಿದೆ.
ಈಗಾಗಲೇ ಕಂದಾಹಾರ್ ಸೇರಿದಂತೆ ಮುಕ್ಕಾಲು ಭಾಗ ಅಫ್ಘಾನ್ ಉಗ್ರರ ವಶವಾಗಿದೆ.
ತಾಲಿಬಾನ್ ಉಗ್ರರು ವಶಕ್ಕೆ ಪಡೆದಿರುವ ಪ್ರದೇಶಗಳಲ್ಲಿರುವ 12- 45ದೊಳಗಿನ ಮಹಿಳೆಯರನ್ನು ಎಳೆದೊಯ್ದು ಲೈಂಗಿಕವಾಗಿ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ವರದಿಯಾಗಿದೆ.
ಹಳ್ಳಿಗಳಲ್ಲಿರುವ ಮನೆ ಮನೆಗೂ ನುಗ್ಗಿ ಹೆಣ್ಣುಮಕ್ಕಳನ್ನು ಎಳೆದೊಯ್ದು ಲೈಂಗಿಕವಾಗಿ ಬಳಸಿಕೊಂಡು ಹಿಂಸಿಸಿ ಹತ್ಯೆಗೈಯಲಾಗುತ್ತಿದೆ. ಹೀಗಾಗಿ ಅಲ್ಲಿಯ ಜನ ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದು, ಅಫ್ಘಾನಿಸ್ತಾನ ಸರ್ಕಾರ ಕೂಡ ಕೈಚೆಲ್ಲಿ ಕುಳಿತಿದೆ ಎಂದು ವರದಿ ತಿಳಿಸಿದೆ.
ಈ ನಡುವೆ ಜನರನ್ನು ರಕ್ಷಿಸಲು, ಹಿಂಸಾತ್ಮಕ ಕೃತ್ಯ ನಿಲ್ಲಿಸಿದರೆ ತಾಲಿಬಾನ್ ಉಗ್ರರಿಗೆ ಅಧಿಕಾರದಲ್ಲಿ ಪಾಲು ನೀಡುವುದಾಗಿ ಅಫ್ಘಾನಿಸ್ತಾನ ಸರ್ಕಾರ ಘೋಷಿಸಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.