newsics.com
ಕಾಬೂಲ್: ಅಪ್ಘಾನಿಸ್ತಾನಕ್ಕೆ ಭಾರತ ಸೇನೆ ಕಳುಹಿಸಿದರೆ ಅದು ಅಪಾಯಕಾರಿ ಹೆಜ್ಜೆ ಯಾಗಲಿದೆ ಎಂದು ತಾಲಿಬಾನ್ ಎಚ್ಚರಿಕೆ ನೀಡಿದೆ.
ಈಗಾಗಲೇ ಇತರ ರಾಷ್ಟ್ರಗಳ ಸೇನಾ ಯೋಧರಿಗೆ ಯಾವ ಪರಿಸ್ಥಿತಿ ಬಂದಿದೆ ಎಂಬುದು ತೆರೆದ ಪುಸ್ತಕವಾಗಿದೆ ಎಂದು ತಾಲಿಬಾನ್ ವಕ್ತಾರ ಮೊಹಮ್ಮದ್ ಸುಹೇಲ್ ಶಹೀನ್ ಎಚ್ಚರಿಕೆ ನೀಡಿದ್ದಾನೆ.
ಭಾರತ, ಅಪ್ಘಾನಿಸ್ತಾನದಲ್ಲಿ ಶಾಂತಿ ಬಯಸುತ್ತಿದ್ದು, ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸಮುದಾಯದ ಪ್ರಯತ್ನಗಳಿಗೆ ಬೆಂಬಲ ಸೂಚಿಸಿದೆ.
ದೋಹಾದಲ್ಲಿ ನಡೆದ ಅಪ್ಘಾನ್ ಶಾಂತಿ ಮಾತುಕತೆಯಲ್ಲಿ ಭಾರತ ಕೂಡ ಭಾಗವಹಿಸಿದೆ.