newsics.com
ಕಾಬೂಲ್: ಅಫ್ಘಾನಿಸ್ತಾನದ ಮೇಲೆ ಬಿಗಿ ಹಿಡಿತ ಸಾಧಿಸಿರುವ ತಾಲಿಬಾನಿಗಳು ರಾಜಧಾನಿ ಕಾಬೂಲ್ ಗೂ ಪ್ರವೇಶಿಸಿದ್ದಾರೆ.
ಆದರೆ ಕಾಬೂಲ್ ಅನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದಿಲ್ಲ. ಶಾಂತಿಯುತವಾಗಿ ನಮಗೆ ಹಸ್ತಾಂತರಿಸಿ ಎಂದು ಉಗ್ರರು ಕೇಳಿದ್ದಾರೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಉಗ್ರರ ತಂಡದ ನಾಯಕ ಕಾಬೂಲ್ ನಾಗರಿಕರನ್ನು ಭಯಪಡಬೇಡಿ ಮತ್ತು ನಗರವನ್ನು ತೊರೆಯಬೇಡಿ ಎಂದು ಹೇಳಿದ್ದಾರೆ ಎಂದೂ ವರದಿಯಾಗಿದೆ.
ಹೀಗಾಗಿ ಅಫ್ಘಾನ್ ಸರ್ಕಾರ ಪತನವಾಗಿ ಸಂಪೂರ್ಣ ತಾಲಿಬಾನಿಗಳ ವಶವಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ.
ಹೊಸದಾಗಿ ಜಾರಿಯಾಗುವ ಕಾಯ್ದೆಗಳಲ್ಲಿ ಸ್ಪಷ್ಟತೆ ಇಲ್ಲ : ಸಿಜೆಐ ರಮಣ ವಿಷಾದ