newsics.com
ಲಂಡನ್: ಗೌಪ್ಯತೆಯ ವಿಷಯವಾಗಿ ವಾಟ್ಸಾಪ್ ಕುರಿತು ಹರಡುತ್ತಿರುವ ವಿಚಾರಗಳಿಂದ ಜನ ಟೆಲಿಗ್ರಾಂ ನತ್ತ ಮುಖಮಾಡಿದ್ದಾರೆ. ಟೆಲಿಗ್ರಾಂ ಕಳೆದ ಕೆಲವು ದಿನಗಳಿಂದ 500 ಮಿಲಿಯನ್’ಗೂ ಹೆಚ್ಚು ಬಳಕೆದಾರರನ್ನು ಪಡೆದುಕೊಂಡಿದೆ. ಕಳೆದ 72 ಗಂಟೆಗಳಲ್ಲಿ 25 ಮಿಲಿಯನ್ ಹೊಸ ಬಳಕೆದಾರರನ್ನು ಸೇರಿಸಿಕೊಂಡಿದೆ ಎಂದು ವರದಿ ತಿಳಿಸಿದೆ. ಹೊಸ ಬಳಕೆದಾರರಲ್ಲಿ ಶೇ.38ರಷ್ಟು ಏಷ್ಯಾದವರೇ ಆಗಿದ್ದಾರೆ ಎನ್ನಲಾಗಿದೆ. ಟೆಲಿಗ್ರಾಮ್ ಸಿಇಒ ಮತ್ತು ಸಂಸ್ಥಾಪಕ ಪಾವೆಲ್ ಡುರೊವ್ ಅವರು, ಕಳೆದ ವರ್ಷಕ್ಕೆ ಹೋಲಿಸಿದರೆ ಜಾಗತಿಕ ಬಳಕೆದಾರರ ಸೇರ್ಪಡೆ ಗಮನಾರ್ಹ ಹೆಚ್ಚಳ ಕಂಡಿದೆ, ಪ್ರತಿದಿನ 1.5 ಮಿಲಿಯನ್ ಹೊಸ ಬಳಕೆದಾರರು ಸೈನ್ ಅಪ್ ಆಗುತ್ತಿದ್ದಾರೆ ಎಂದು ಬ್ಲಾಗ್ ಪೋಸ್ಟ್’ನಲ್ಲಿ ಹೇಳಿಕೊಂಡಿದ್ದಾರೆ.