newsics.com
ಸ್ಟಾಕ್ ಹೋಂ: ಸ್ವೀಡನ್ ನ ವೆಟ್ ಲ್ಯಾಂಡ್ ನಗರದಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಹರಿತವಾದ ಆಯುಧದಿಂದ ಈ ದಾಳಿ ನಡೆಸಲಾಗಿದೆ. ಆರಂಭದಲ್ಲಿ ಇದನ್ನು ಕೊಲೆ ಯತ್ನ ಎಂದು ಪರಿಗಣಿಸಲಾಗಿತ್ತು.
ಅಪರಾಧ ಸ್ವರೂಪದ ಅಧ್ಯಯನದ ಬಳಿಕ ಶಂಕಿತ ಭಯೋತ್ಪಾದಕ ದಾಳಿ ಎಂಬ ತೀರ್ಮಾನಕ್ಕೆ ಬರಲಾಗಿದೆ.
20ರ ಹರೆಯದ ವ್ಯಕ್ತಿ ಹರಿತವಾದ ಆಯುಧದಿಂದ ಎಂಟು ಮಂದಿಯ ಮೇಲೆ ದಾಳಿ ನಡೆಸಿದ್ದಾನೆ. ಇದರಲ್ಲಿ ಐಧು ಮಂದಿಯ ಸ್ಥಿತಿ ಗಂಭೀರವಾಗಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆಯ ಹಿಂದೆ ಸಂಘಟನೆಗಳು ಶಾಮೀಲಾಗಿವೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.