newsics.com
ಮಾಲಿ: ಗಲಭೆಗ್ರಸ್ತ ಮಾಲಿಯಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 51 ನಾಗರಿಕರು ಮೃತಪಟ್ಟಿದ್ದಾರೆ. ಮೂರು ಗ್ರಾಮಗಳ ಮೇಲೆ ದಾಳಿ ನಡೆಸಿದ ಭಯೋತ್ಪಾದಕರು ಮನ ಬಂದಂತೆ ಗುಂಡು ಹಾರಿಸಿ ಈ ಮಾರಣ ಹೋಮ ನಡೆಸಿದ್ದಾರೆ.
ದಾಳಿ ಬಳಿಕ ಭಯೋತ್ಪಾದಕರು ಸಾಕು ಪ್ರಾಣಿಗಳನ್ನು ಅಪಹರಿಸಿದ್ದಾರೆ.
ಇದೇ ವೇಳೆ ಮಾಲಿ ಸಮೀಪದ ಬರ್ಕಿನೋ ಪಾಸೋದಲ್ಲಿ ಉಗ್ರರು ನಡೆಸಿದ ಹೊಂಚು ದಾಳಿಯಲ್ಲಿ 12ಸೈನಿಕರು ಹುತಾತ್ಮರಾಗಿದ್ದಾರೆ. ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.