ಲಾಹೋರ್: ಅಸಮರ್ಪಕ ಭೂಪಟ ಹಾಗೂ ಮೊಹಮ್ಮದ್ ಆಲಿ ಜಿನ್ನಾ ಕುರಿತ ಅಸ್ಪಷ್ಟ ಮಾಹಿತಿ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪಂಜಾಬ್ ಸರ್ಕಾರ 100ಕ್ಕೂ ಹೆಚ್ಚು ಪಠ್ಯಪುಸ್ತಕವನ್ನು ರದ್ದುಗೊಳಿಸಿದೆ. 10 ಸಾವಿರ ಆಕ್ಷೇಪಾರ್ಹ ಪುಸ್ತಕಗಳನ್ನು ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಂದ ವಾಪಸ್ ಪಡೆಯಲಾಗಿದೆ.
ಪಾಕಿಸ್ತಾನದ ಭೂಪಟದಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ನಮೂದಿಸಿಲ್ಲದ, ಪಾಕ್ ಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾ ಕುರಿತ ಅಸ್ಪಷ್ಟ ಮಾಹಿತಿ ಇದ್ದುದೇ ಪಠ್ಯ ರದ್ದತಿಗೆ ಕಾರಣ ಎಂದು ಪಾಕಿಸ್ತಾನದ ಪಂಜಾಬ್ ಸರ್ಕಾರ ಹೇಳಿದೆ. ಮೊಹಮ್ಮದ್ ಅಲಿ ಜಿನ್ನಾ ಅವರ ದ್ವಿರಾಷ್ಟ್ರ ಸಿದ್ಧಾಂತವನ್ನು ಖಂಡಿಸುವ ಸಾಲುಗಳು ಮತ್ತು ರಾಷ್ಟ್ರಕವಿ ಮೊಹಮ್ಮದ್ ಇಕ್ಬಾಲ್ ಅವರ ಜನ್ಮ ದಿನಾಂಕವನ್ನು ಪಠ್ಯದಲ್ಲಿ ತಪ್ಪಾಗಿ ಪ್ರಕಟಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪುಸ್ತಕಗಳನ್ನು ಬ್ಯಾನ್ ಮಾಡಿದೆ.
ಮತ್ತೆ ಎದುರಾಗಲಿದೆ ಆರ್ಥಿಕ ಸಂಕಷ್ಟ- ಆರ್’ಬಿಐ ಮಾಜಿ ಗವರ್ನರ್ ಆತಂಕ
ಆಕ್ಸ್ ಫರ್ಡ್, ಕೇಂಬ್ರಿಡ್ಜ್, ಲಿಂಕ್ ಇಂಟರ್ ನ್ಯಾಷನಲ್, ಪಾರಾಗಾನ್ ಬುಕ್ಸ್ ಪ್ರಕಾಶನಗಳ ಆಕ್ಷೇಪಾರ್ಹ ಪುಸ್ತಕಗಳನ್ನು ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಂದ ವಾಪಸ್ ಪಡೆಯಲಾಗಿದೆ ಎಂದು ಪಂಜಾಬ್ ಪಠ್ಯಪುಸ್ತಕ ಬೋರ್ಡ್ ನ ವ್ಯವಸ್ಥಾಪಕ ನಿರ್ದೇಶಕ ರಾಯ್ ಮನ್ಜೂರ್ ನಾಸೀರ್ ತಿಳಿಸಿದ್ದಾರೆ.