ನೈಜೀರಿಯಾ: ಇಲ್ಲಿನ ವ್ಯಕ್ತಿಯೊಬ್ಬ ವಧು ಕಡೆಯವರ ಬೇಡಿಕೆ ಪೂರೈಸಲಾಗದೆ ಆಕೆಯನ್ನು ಮದುವೆಯಾಗುವ ಆಸೆ ಕೈಬಿಟ್ಟಿದ್ದಾನೆ.
ನೈಜೀರಿಯಾದಲ್ಲಿ ವಧು ದಕ್ಷಿಣೆ ಪದ್ಧತಿ ಜಾರಿಯಲ್ಲಿದ್ದು, ವರನ ಕಡೆಯವರು ವಧುವಿನ ಕಡೆಯವರಿಗೆ ಉಡುಗೊರೆ ರೂಪದಲ್ಲಿ ಹಣ, ವಸ್ತು ನೀಡಬೇಕು. ವರ ಆಂಡರ್ಸನ್ ಗೆ ವಧುವಿನ ಕಡೆಯವರು ನೀಡಿದ ಉಡುಗೊರೆ ಪಟ್ಟಿ ನೋಡಿ ಮದುವೆಯಿಂದ ಹಿಂದೆ ಸರಿದಿದ್ದಾನೆ. ‘ನಿನ್ನ ಎಲ್ಲ ಆಸೆ ಈಡೇರಿಸಲು ನನ್ನಿಂದ ಸಾಧ್ಯವಿಲ್ಲ. ಅದಕ್ಕೆ ಶ್ರೀಮಂತ ವರನನ್ನು ಆಯ್ಕೆ ಮಾಡಿಕೊಳ್ಳುವಂತೆ’ ವಧುವಿಗೆ ಸಲಹೆ ನೀಡಿ ಮದುವೆ ಕೈಬಿಟ್ಟಿದ್ದಾನಂತೆ.
ವಧುವಿನ ಕಡೆಯವರು ನೀಡಿದ್ದ ಉಡುಗೊರೆ ಪಟ್ಟಿಯನ್ನು ಆಂಡರ್ಸನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ವಧುವಿನ ತಾಯಿಗೂ ಹಣ ನೀಡುವ ಬೇಡಿಕೆಯಿದೆ.
ವಧು ದಕ್ಷಿಣೆ ನೀಡಲಾರದೆ ಮದುವೆ ಕೈಬಿಟ್ಟ ವರ!
Follow Us