ನ್ಯೂಯಾರ್ಕ್: ಭಾರತದಲ್ಲಿ ನಡೆಯುತ್ತಿರುವ ಪ್ರಕ್ರಿಯೆ ಬೇಸರ ಮೂಡಿಸಿದ್ದು, ಸಿಎಎ ಬೇಡವಾಗಿತ್ತು. ಇದರಿಂದ ಭಾರತದಲ್ಲಿ ಮುಂದಿನ ದಿನಗಳಲ್ಲಿ ಬಾಂಗ್ಲಾದೇಶಿಯರೇ ಹೆಚ್ಚಲಿದ್ದಾರೆ ಎಂದು ಮೈಕ್ರೋಸಾಫ್ಟ್ ಕಂಪನಿ ಸಿಇಒ ಭಾರತೀಯ ಮೂಲದ ಸತ್ಯ ನಡೆಲ್ಲಾ ಅಭಿಪ್ರಾಯಪಟ್ಟಿದ್ದಾರೆ.
ಮ್ಯಾನ್ಹ್ಯಾಟನ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸತ್ಯ ನಡೆಲ್ಲಾ, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ದೇಶದ ಸ್ಥಿತಿ ಬೇಸರ ಮೂಡಿಸಿದೆ ಎಂದರು.
ಪ್ರತಿ ದೇಶವೂ ತನ್ನ ಗಡಿ ಮತ್ತು ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಿಕೊಳ್ಳುತ್ತವೆ. ಜತೆಗೆ ಅದಕ್ಕೆ ಸರಿಯಾದ ವಲಸೆ ನೀತಿ ರೂಪಿಸುತ್ತದೆ. ಆದರೆ ಭಾರತದಲ್ಲಿ ಹಾಗಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸಿಎಎ ಬೇಡವಾಗಿತ್ತು: ಸತ್ಯ ನಡೆಲ್ಲಾ
Follow Us