newsics.com
ನ್ಯೂಯಾರ್ಕ್: ಅಲರ್ಜಿ ಸಮಸ್ಯೆ ಎದುರಿಸುತ್ತಿದ್ದ ಬೋಸ್ಟನ್ ವೈದ್ಯರೊಬ್ಬರು ಮೊಡರ್ನಾ ಕೊರೋನಾ ಲಸಿಕೆ ಪಡೆದಿದ್ದು, ಈಗ ಅವರ ಸ್ಥಿತಿ ಗಂಭೀರವಾಗಿದೆ.
ಕೊರೊನಾ ಲಸಿಕೆ ಪಡೆದ ಬಳಿಕ ಮತ್ತಷ್ಟು ಅಲರ್ಜಿ ಸಮಸ್ಯೆಯಿಂದ ಬಳಲಿದ್ದಾರೆ. ಈಗ ಅವರ ಸ್ಥಿತಿ ಗಂಭೀರವಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಚಿಪ್ಪು ಹೊಂದಿರುವ ಸಮುದ್ರ ಜೀವಿಗಳ ಸೇವನೆಯಿಂದ ಅಲರ್ಜಿ ಸಮಸ್ಯೆ ಎದುರಿಸುತ್ತಿದ್ದ ಬೋಸ್ಟನ್ ವೈದ್ಯಕೀಯ ಕೇಂದ್ರದ ಜೆರಿಯಾಟ್ರಿಕ್ ಆಂಕೊಲಾಜಿ ಸಹೋದ್ಯೋಗಿ ಡಾ. ಹೊಸೆನ್ ಸದರ್ಜಾಡೆ ಅವರು ಲಸಿಕೆ ಹಾಕಿದ ಕೂಡಲೇ ತೀವ್ರ ಪ್ರತಿಕ್ರಿಯೆ ಹೊಂದಿದ್ದಾರೆ. ತಲೆತಿರುಗುವಿಕೆ ಮತ್ತು ಹೃದಯ ಬಡಿತದಲ್ಲಿ ಏರಿಕೆ ಉಂಟಾಗಿದೆ ಎಂದು ವರದಿ ಹೇಳಿದೆ. ತುರ್ತು ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ. ಪಿಫೈಜರ್ ಲಸಿಕೆಯನ್ನು ಪಡೆದು ಅದರ ಮೂಲಕ ಅಡ್ಡಪರಿಣಾಮಗಳನ್ನು ಎದುರಿಸುತ್ತಿರುವವರ ಪ್ರಕರಣಗಳ ಮೇಲೆ ಎಫ್ ಡಿಎ ನಿಗಾ ವಹಿಸುತ್ತಿದೆ.
ಕಳೆದ ವಾರ ಅಮೆರಿಕ 18 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ಮೊಡರ್ನಾ ಲಸಿಕೆ ತುರ್ತು ಬಳಕೆಗೆ ಅನುಮೋದನೆ ನೀಡಿತ್ತು. ಡಿಸೆಂಬರ್ ಅಂತ್ಯದೊಳಗೆ ಅಮೆರಿಕಕ್ಕೆ ಸುಮಾರು 20 ಮಿಲಿಯನ್ ಡೋಸ್’ಗಳನ್ನ ನೀಡುವುದಾಗಿ ಮೊಡರ್ನಾ ಸಂಸ್ಥೆ ಹೇಳಿತ್ತು.
ರಾಜ್ಯಕ್ಕೆ ಹೊಸ ಬಗೆಯ ಕೊರೋನಾ; ಕೇಂದ್ರದಿಂದಲೇ ಮಾಹಿತಿ- ಸಚಿವ
ಯುಕೆಯಿಂದ ಬಂದ 151ಪ್ರಯಾಣಿಕರು ನಾಪತ್ತೆ: ಸೋಂಕು ಹರಡುವ ಆತಂಕ ಹೆಚ್ಚಳ
ನೆಟ್ಟಿಗರ ಗಮನ ಸೆಳೆದ ಧರ್ಮಸ್ಥಳದ ಎತ್ತಿನಗಾಡಿ ಕಾರು!