newsics.com
ಜೆಕ್ ಗಣರಾಜ್ಯ: ಹುಚ್ಚು ಧೈರ್ಯ ಹಾಗೂ ಅತಿಯಾಸೆಯಿಂದ ಉದ್ದೇಶಪೂರ್ವಕವಾಗಿ ಕೊರೋನಾ ಸೋಂಕು ತಗುಲಿಸಿಕೊಂಡಿದ್ದ ಜೆಕ್ ಗಣರಾಜ್ಯದ ಜಾನಪದ ಗಾಯಕಿ ಹನಾ ಹೊರ್ಕಾ ಸಾವನ್ನಪ್ಪಿದ್ದಾರೆ.
ಕೋವಿಡ್ ಲಸಿಕೆ ಹಾಕಿಸಿಕೊಳ್ಳದ ಹನ ಹೊರ್ಕಾ, ಕೆಲ ದಿನಗಳ ಹಿಂದೆ, ನನಗೆ ಕೋವಿಡ್ ಸೋಂಕು ತಗುಲಿದ್ದು ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಇದಾಗಿ ನಾಲ್ಕೈದು ದಿನಗಳಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಹನ ಹೊರ್ಕಾ ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ಅವರ ಮಗ ರೆಕ್ಸ್, ‘ನನಗೆ ಮತ್ತು ನನ್ನ ತಂದೆಗೆ ಕೊರೋನಾ ಸೋಂಕು ತಗುಲಿತ್ತು. ಕೆಲ ಸ್ಥಳಗಳಿಗೆ ಪ್ರವೇಶಿಸಲು ಚೇತರಿಕೆ ಪಾಸ್ ಸಿಗುತ್ತದೆ ಎನ್ನುವ ಕಾರಣಕ್ಕೆ ನನ್ನ ತಾಯಿ ಬೇಕೆಂದೇ ಸೋಂಕು ತಗುಲಿಸಿಕೊಂಡರು’ ಎಂದು ಹೇಳಿದ್ದಾರೆ.
ಸೋಂಕು ತಗುಲಿದ ತಕ್ಷಣ ಅವರು ಪ್ರತ್ಯೇಕವಾಸದಲ್ಲಿದ್ದರು. ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು ಎಂದು ಅವರ ಮಗ ರೆಕ್ಸ್ ಹೇಳಿದ್ದಾರೆ.
ಜೆಕ್ ಗಣರಾಜ್ಯದಲ್ಲಿ ಲಸಿಕೆ ಪಡೆದವರು ಮತ್ತು ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡವರು ತಮ್ಮ ವಿವರಗಳನ್ನು ನೀಡಿ ಸಾರ್ವಜನಿಕ ಸ್ಥಳಗಳು, ಬಾರ್, ಪಬ್, ಕೆಫೆ, ಸಿನಿಮಾ ಮಂದಿರ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರಳಲು ಅವಕಾಶವಿದೆ. ಬಾರ್, ಕೆಫೆ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರಳಲು ನನ್ನ ತಾಯಿ ಕೋವಿಡ್ ಸೋಂಕು ತಗುಲಿಸಿಕೊಂಡರು. ಆದರೆ ಅವರು ಗುಣಮುಖರಾಗಲಿಲ್ಲ ಎಂದು ರೆಕ್ಸ್ ಹೇಳಿದ್ದಾರೆ.
ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ರಸ್ತೆ ಅಪಘಾತದಲ್ಲಿ ಸಾವು