newsics.com
ಸಿಡ್ನಿ (ಆಸ್ಟ್ರೇಲಿಯ): ದಕ್ಷಿಣ ಆಸ್ಟ್ರೇಲಿಯಾದಲ್ಲಿ ಸಾಕಷ್ಟು ನೀರಿಲ್ಲದ ಹಿನ್ನೆಲೆಯಲ್ಲಿ 380 ಕ್ಕೂ ಹೆಚ್ಚು ತಿಮಿಂಗಿಲಗಳು ಸಾವನ್ನಪ್ಪಿವೆ.
ಆಳವಿಲ್ಲದ ನೀರಿನಲ್ಲಿ ಸಿಲುಕಿದ್ದೇ ತಿಮಿಂಗಿಲಗಳ ಸಾವಿಗೆ ಕಾರಣ ಎನ್ನಲಾಗಿದೆ. ಪಶ್ಚಿಮ ಆಸ್ಟ್ರೇಲಿಯದ ತಾಸ್ಮೇನಿಯ ಕರಾವಳಿಯ ಮ್ಯಾಕ್ವರೀ ಬಂದರಿನ ಸಮೀಪದ ನೀರಿನಲ್ಲಿ ಸುಮಾರು 460 ಪೈಲಟ್ ತಿಮಿಂಗಿಲಗಳು ಸಿಕ್ಕಿಹಾಕಿಕೊಂಡಿದ್ದವು. ಈ ಪೈಕಿ ಹೆಚ್ಚಿನವು ಮೃತಪಟ್ಟಿವೆ. ಸುಮಾರು 50 ತಿಮಿಂಗಿಲಗಳನ್ನು ಅಧಿಕಾರಿಗಳು ಪಾರು ಮಾಡಿದ್ದಾರೆ. ಈ ಪ್ರದೇಶದಲ್ಲಿ ಈಗ 30 ಜೀವಂತ ತಿಮಿಂಗಿಲಗಳಿವೆ. ಅವುಗಳನ್ನು ರಕ್ಷಿಸಲು ಪ್ರಯತ್ನ ನಡೆದಿದೆ. ಸುಮಾರು 50 ತಿಮಿಂಗಿಲಗಳನ್ನು ರಕ್ಷಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ತಾಸ್ಮೇನಿಯದ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆಳವಿಲ್ಲದ ನೀರಿನಲ್ಲಿ ಸಿಲುಕಿ 380ಕ್ಕೂ ಹೆಚ್ಚು ತಿಮಿಂಗಿಲಗಳ ಸಾವು
Follow Us