Wednesday, July 6, 2022

ಶ್ರೀಲಂಕಾ ಚುನಾವಣೆ; ರಾಜಪಕ್ಸೆ ಪಕ್ಷ ಜಯಭೇರಿ

Follow Us

ಕೊಲಂಬೊ: ಶ್ರೀಲಂಕಾ ಸಾರ್ವತ್ರಿಕ ಚುನಾವಣೆಯಲ್ಲಿ ಮಹಿಂದಾ ರಾಜಪಕ್ಸೆ ಅವರ ಆಡಳಿತಾರೂಢ ಎಸ್‌ಎಲ್‌ಪಿಪಿ (ಶ್ರೀಲಂಕಾ ಪೀಪಲ್ಸ್ ಪಾರ್ಟಿ) ಪಕ್ಷ ಅಭೂತಪೂರ್ವ ಜಯಸಾಧಿಸಿದೆ.
ಮೂಲಗಳ ಪ್ರಕಾರ, ರಾಜಪಕ್ಸೆ ಅವರ ಎಸ್ ಎಲ್ ಪಿಪಿ ಪಕ್ಷ 145 ಸ್ಥಾನಗಳಲ್ಲಿ ಜಯಭೇರಿ ಭಾರಿಸಿದ್ದು, ಎಸ್ ಎಲ್ ಪಿಪಿ ಸೇರಿದಂತೆ ರಾಜಪಕ್ಸೆ ಅವರ ಮೈತ್ರಿಕೂಟ ಒಟ್ಟು 150 ಸ್ಥಾನಗಳನ್ನು ಗೆದ್ದಿದೆ. ಶ್ರೀಲಂಕಾ ಸಂಸತ್‌ನ ಸದಸ್ಯರ ಸಂಖ್ಯೆ 225 ಆಗಿದ್ದು, ಈ ಪೈಕಿ ಪ್ರಕಟವಾದ ಫಲಿತಾಂಶಗಳ ಪೈಕಿ ರಾಜಪಕ್ಸೆ ಅವರ ಪಕ್ಷ ಭಾರಿ ಗೆಲುವಿನತ್ತ ಸಾಗಿದೆ.
ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಇದು ಆಡಳಿತಾರೂಢ ಪಕ್ಷಕ್ಕೆ ಲಭಿಸಿದ ಅದ್ಭುತ ಗೆಲುವು ಎಂದು ಟ್ವೀಟ್‌ ಮಾಡಿದ್ದಾರೆ.
ದ್ವೀಪ ರಾಷ್ಟ್ರದಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಗುರುವಾರ (ಆ.6) ತಡರಾತ್ರಿಯೂ ಮುಂದುವರಿದಿತ್ತು.
ಸಿಂಹಳಿಯರು ಹೆಚ್ಚಾಗಿರುವ ಜಿಲ್ಲೆಗಳಲ್ಲಿ ರಾಜಪಕ್ಸೆ ಪಕ್ಷಕ್ಕೆ ಶೇ.60ರಷ್ಚು ಮತಗಳು ಚಲಾವಣೆಯಾಗಿದೆ. ಚಲಾವಣೆಯಾದ ಒಟ್ಟು 6.8 ಮಿಲಿಯನ್ ಮತಗಳ ಪೈಕಿ ರಾಜಪಕ್ಸೆ ಅವರ ಪಕ್ಷಕ್ಕೇ ಶೇ.59.9ರಷ್ಟು ಮತಗಳು ಚಲಾವಣೆಯಾಗಿವೆ ಎನ್ನಲಾಗಿದೆ.

ಅಮೆರಿಕದಲ್ಲಿ ಟಿಕ್ ಟಾಕ್ ನಿಷೇಧ ಮಾಡಿದ ಟ್ರಂಪ್

ಮಹಿಂದ ಅವರ ಪ್ರಬಲ ಪ್ರತಿಸ್ಪರ್ಧಿ ಎಂದೇ ಪರಿಗಣಿಸಲಾಗಿರುವ ಸಜಿತ್‌ ಪ್ರೇಮದಾಸ ಅವರ ಪಕ್ಷ ಯುನೈಟೆಡ್‌ ನ್ಯಾಷನಲ್‌ ಪಾರ್ಟಿ (ಯುಎನ್‌ಪಿ) ನಾಲ್ಕನೇ ಸ್ಥಾನ ಪಡೆದಿದೆ.
ಮೋದಿ ಅಭಿನಂದನೆ
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ರಾಜಪಕ್ಸೆ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಖುದ್ದು ಮಹೀಂದಾ ರಾಜಪಕ್ಸೆ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಶ್ರೀಲಂಕಾ ಜನರ ಆಶೀರ್ವಾದದೊಂದಿಗೆ ಭಾರತದೊಂದಿಗಿನ ಸುಮಧುರ ಸಂಬಂಧವನ್ನು ಮುಂದುವರೆಸುವುದಾಗಿ ರಾಜಪಕ್ಸೆ ಹೇಳಿದ್ದಾರೆ. ಭಾರತ-ಶ್ರೀಲಂಕಾ ಸಂಬಂಧ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಮತ್ತಷ್ಟು ಗಟ್ಟಿಯಾಗಲಿದ್ದು, ಮೋದಿ ಅವರೊಂದಿಗೆ ಹೆಗಲು ಕೊಟ್ಟು ಕೆಲಸ ಮಾಡಲು ಸಿದ್ಧ ಎಂದು ರಾಜಪಕ್ಸೆ ಭರವಸೆ ನೀಡಿದ್ದಾರೆ. ರಾಜಪಕ್ಸೆ ಅವರ ಟ್ವೀಟ್‌ಗೆ ಮರು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಭಾರತ-ಶ್ರೀಲಂಕಾ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಸಿದ್ಧವಿರುವುದಾಗಿ ಹೇಳಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಚಾಕಲೇಟ್ ಕವರ್ ನಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್: ನಾಲ್ವರ ಸೆರೆ

newsics.com ಬೆಂಗಳೂರು:  ವಿದ್ಯಾರ್ಥಿಗಳಿಗೆ ಚಾಕಲೇಟ್ ಕವರ್ ನಲ್ಲಿ ಅಡಗಿಸಿ ಡ್ರಗ್ಸ್ ಪೂರೈಸುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರಿನ  ಆವಲ ಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು  ಮೊಹಮ್ಮದ್ ಅಸ್ಲಾಂ, ...

ಒಟಿಪಿ ನೀಡುವ ವಿಷಯಕ್ಕೆ ಜಗಳ: ಪ್ರಯಾಣಿಕನ ಹತ್ಯೆ ಮಾಡಿದ ಕ್ಯಾಬ್ ಚಾಲಕ

newsics.com ಚೆನ್ನೈ: ಕಾರನ್ನು ಬಾಡಿಗೆಗೆ ನಿಗದಿಪಡಿಸಿ ಪ್ರಯಾಣ ಆರಂಭಿಸುವ ಮೊದಲು ಒಟಿಪಿ ನೀಡುವ ಜಗಳ ಪ್ರಯಾಣಿಕನ ಕೊಲೆಯಲ್ಲಿ ಅಂತ್ಯವಾಗಿದೆ. ಚೆನ್ನೈ ನಗರದ ನವಲೂರಿನಲ್ಲಿ ಈ ಘಟನೆ ನಡೆದಿದೆ. ಸಾಫ್ಟವೇರ್ ಡೆವಲಪರ್ ಆಗಿರುವ...

ದೇಶದಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು, 28 ಜನರ ಸಾವು

newsics.com ನವದೆಹಲಿ:  ದೇಶದಲ್ಲಿ ಕೊರೋನಾದ ಹಾವಳಿ ಮುಂದುವರಿದಿದೆ.  ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ ಕೊರೋನಾ ಸೋಂಕಿತರಾಗಿದ್ದ 15,394 ಮಂದಿ ಗುಣಮುಖರಾಗಿದ್ದಾರೆ. ಕೊರೋನಾದಿಂದ ಕಳೆದ 24 ಗಂಟೆ...
- Advertisement -
error: Content is protected !!