Sunday, July 3, 2022

ಲೆಬನಾನ್ ಸ್ಫೋಟ; 30 ಗಂಟೆ ಬಳಿಕ ಜೀವಂತವಾಗಿ ಸಿಕ್ಕ ಕಾರ್ಮಿಕ!

Follow Us

ಲೆಬನಾನ್: ಆಯುಷ್ಯ ಗಟ್ಟಿಯಾಗಿದ್ದರೆ ಎಲ್ಲಾದ್ರೂ ಬದುಕಬಹುದು ಅಂತಾರೆ. ಅದಕ್ಕೆ ಸಾಕ್ಷಿಯಂತಿದೆ ಈ ಘಟನೆ. ವಿಶ್ವವನ್ನೇ ಬೆಚ್ಚಿಬೀಳಿಸಿದ ಬೈರುತ್ ಕೆಮಿಕಲ್ ಸ್ಫೋಟ ನಡೆದು 30 ಗಂಟೆಗಳ ನಂತರವೂ ಕಾರ್ಮಿಕನೊಬ್ಬ ಬದುಕಿ ಬಂದಿದ್ದಾನೆ.
ಲೆಬನಾನ್ ರಾಜಧಾನಿ ಬೈರುತ್ ಬಂದರಿನಲ್ಲಿ ನಡೆದ ಕೆಮಿಕಲ್ ಸ್ಫೋಟದ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ರಭಸದ ವೇಗಕ್ಕೆ ಹಾರಿ‌ ಸಮುದ್ರಕ್ಕೆ ಬಿದ್ದಿದ್ದ.
ಆದರೆ ಆತನ ಆಯುಷ್ಯರೇಖೆ ಎಷ್ಟು ಗಟ್ಟಿಯಾಗಿ ಇತ್ತೆಂದರೇ ಆತ ಘಟನೆ ನಡೆದ 30 ತಾಸುಗಳ ಬಳಿಕವೂ ರಕ್ತಸಿಕ್ತ ಸ್ಥಿತಿಯಲ್ಲಿ ಬದುಕಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದವರಿಗೆ ಸಿಕ್ಕಿದ್ದಾನೆ.
ಬೈರುತ್​ ಬಂದರಿನ ಕಾರ್ಮಿಕ ಅಮಿನ್​ ಅಲ್​ ಜಹೇದ್​ ಬದುಕುಳಿದಾತ. ಸ್ಫೋಟದಲ್ಲಿ ಕಾಣೆಯಾಗಿರುವ ವ್ಯಕ್ತಿಗಳ ಪತ್ತೆಗಾಗಿ ಸೃಷ್ಟಿಸಿರುವ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಜಹೇದ್​ ಫೋಟೋವನ್ನು ಪೋಸ್ಟ್​ ಮಾಡಲಾಗಿದ್ದು, ಘಟನೆ ನಡೆದ 30 ಗಂಟೆಗಳ ಬಳಿಕ ಮೆಡಿಟರೇನಿಯನ್ ಸಮುದ್ರದಲ್ಲಿ ಜಹೇದ್​ ಜೀವಂತವಾಗಿ ಪತ್ತೆಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ರಭಸದ ವೇಗಕ್ಕೆ ಹಾರಿ ಸಮುದ್ರಕ್ಕೆ ಬಿದ್ದ ಜಹೇದ್ ನನ್ನು ರಕ್ಷಿಸಿ ರಫಿಕ್ ಹರಿರಿ ಯೂನಿವರ್ಸಿಟಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಬೈರುತ್ ಸ್ಫೋಟದಿಂದ ಕಾಣೆಯಾದವರ ಪತ್ತೆಗಾಗಿ ಇನ್​ಸ್ಟಾಗ್ರಾಂ ಪೇಜ್​ ತೆರೆಯಲಾಗಿದ್ದು, ಇದರಿಂದ 100ಕ್ಕೂ ಹೆಚ್ಚು ಜನರು ತಮ್ಮ ಕುಟುಂಬಗಳಿಗೆ ತಿಳಿಯದೆ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಹುಡುಕಾಟ ನಡೆದಿದೆ.
ಇದಕ್ಕೆಲ್ಲ ಬೈರುತ್​ ನಗರದ ಬಂದರಿನಲ್ಲಿ ದಾಸ್ತಾನು ಮಾಡಲಾಗಿದ್ದ 2700 ಟನ್​ ಅಮೊನಿಯಂ ನೈಟ್ರೇಟ್​ ಬ್ಲ್ಯಾಸ್ಟ್​ ಕಾರಣವಾಗಿದ್ದು ಭೀಕರ ತೀವ್ರತೆ ಎಷ್ಟಿತ್ತೆಂದರೆ ಬೈರುತ್​ನಿಂದ 240 ಕಿ.ಮೀ. ದೂರದ ದ್ವೀಪದಲ್ಲೂ ಸ್ಫೋಟದ ಸದ್ದು ಕೇಳಿಸಿದೆ. ಸುಮಾರು 135 ಮಂದಿ ಸಾವಿಗೀಡಾಗಿದ್ದು, 5 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಕಲುಷಿತ ನೀರು ಸೇವನೆ; 40 ಕ್ಕೂ ಹೆಚ್ಚು ಜನ ಅಸ್ವಸ್ಥ

newsics.com ರಾಯಚೂರು; ಕಲುಷಿತ ನೀರು ಸೇವನೆ ಮಾಡಿ 40 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ. ಅನೇಕರು ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಲ್ಕಂದಿನ್ನಿಯ ಸರ್ಕಾರಿ...

ಅನಾರೋಗ್ಯ ನೆಪವೊಡ್ಡಿ ಏರ್ ಇಂಡಿಯಾ ಸಂದರ್ಶನಕ್ಕೆ ಹಾಜರಾದ ಇಂಡಿಗೋ ಸಿಬ್ಬಂದಿ, ವಿಮಾನ ಸೇವೆ ವ್ಯತ್ಯಯ

newsics.com ನವದೆಹಲಿ: ಏರ್ ಇಂಡಿಗೋ ಸಿಬ್ಬಂದಿ ಅನಾರೋಗ್ಯದ ನೆಪವೊಡ್ಡಿ ಶನಿವಾರ ಏರ್ ಇಂಡಿಯಾ‌ ಸಂದರ್ಶನಕ್ಕೆ ತೆರಳಿದ್ದರಿಂದ ಇಂಡಿಗೋ ಸೇವೆಯಲ್ಲಿ‌ ವ್ಯತ್ಯಯ ಉಂಟಾಗಿತ್ತು. ವಿಮಾನಯಾನ ವ್ಯತ್ಯಯ ಉಂಟಾಗಿದ್ದಕ್ಕೆ ಇಂಡಿಗೋ ಬಳಿ ಕಾರಣ ಕೇಳಲಾಗಿದೆ ಎಂದು ನಾಗರಿಕ ವಿಮಾನಯಾನ...

ಬೆಂಗಳೂರಿನಲ್ಲಿ 746 ಮಂದಿ ಸೇರಿ ರಾಜ್ಯದಲ್ಲಿ 826 ಜನಕ್ಕೆ ಕೊರೋನಾ ಸೋಂಕು

newsics.com ಬೆಂಗಳೂರು ; ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಇಂದು ಒಟ್ಟು 826 ಕೊರೊನಾ ಪ್ರಕರಣ ವರದಿಯಾಗಿದೆ.ಸಕ್ರಿಯ ಪ್ರಕರಣಗಳ ಸಂಖ್ಯೆ 6,666ಕ್ಕೆ ಏರಿಕೆ ಕಂಡಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,72,285ಕ್ಕೆ ಏರಿಕೆಯಾಗಿದೆ. ಇಂದು ಯಾವುದೇ ಸಾವು...
- Advertisement -
error: Content is protected !!