Tuesday, August 9, 2022

ಕೊರೋನಾ ಸೋಂಕು ತಗುಲಿದ್ದ ಜಗತ್ತಿನ ಮೊದಲ ನಾಯಿ ಸಾವು!

Follow Us

ನ್ಯೂಯಾರ್ಕ್: ಕೊರೋನಾ ಸೋಂಕಿಗೆ ತುತ್ತಾಗಿದ್ದ ಜಗತ್ತಿನ ಮೊದಲ ನಾಯಿ ಅಮೆರಿಕದಲ್ಲಿ ಸಾವನ್ನಪ್ಪಿದೆ. ಅಮೆರಿಕದಲ್ಲಿ ಕೊರೋನಾ ಸೋಂಕಿಗೆ ಬಲಿಯಾದ ಮೊದಲ ನಾಯಿ ಇದಾಗಿದೆ. ಈ ನಾಯಿಗೆ ಮನುಷ್ಯರಲ್ಲಿ ಕಾಣಿಸಿಕೊಳ್ಳುವ ಕೊರೋನಾ ಸೋಂಕಿನ ಲಕ್ಷಣಗಳೇ ಗೋಚರಿಸಿದ್ದವು.
ಏಪ್ರಿಲ್‌ನಿಂದ ಏಳು ವರ್ಷದ ಜರ್ಮನ್ ಷಫರ್ಡ್ ನಾಯಿ ಅನಾರೋಗ್ಯಕ್ಕೆ ತುತ್ತಾಗಿತ್ತು. ನಾಯಿಗಿಂತ ಮೊದಲು ಕೊರೋನಾ ಸೋಂಕು ತಗುಲಿದ್ದ ನಾಯಿಯ ಮಾಲೀಕ ರಾಬರ್ಟ್ ಕೊರೋನಾ ಸೋಂಕಿನಿಂದ ಗುಣಮುಖರಾಗುವ ವೇಳೆಯಲ್ಲೇ ನಾಯಿಗೆ ಸೋಂಕು ತಗುಲಿತ್ತು. ರಾಬರ್ಟ್ ಹಾಗೂ ಅವರ ಪತ್ನಿ ನ್ಯೂಯಾರ್ಕ್‌ನಲ್ಲಿ ವಾಸವಿದ್ದಾರೆ.

ಆ.10ಕ್ಕೆ ಕೋವಿಡ್ ಲಸಿಕೆ; ರಷ್ಯಾ ಘೋಷಣೆ

ನಾಯಿಗೆ ಉಸಿರಾಟದ ತೊಂದರೆಯಿತ್ತು. ವಾರ, ತಿಂಗಳುಗಳು ಕಳೆದಂತೆ ಅದರ ಪರಿಸ್ಥಿತಿ ಚಿಂತಾಜನಕವಾಗಿತ್ತು. ಜುಲೈ 11 ರಂದು ನಾಯಿ ರಕ್ತ ವಾಂತಿ ಮಾಡಿಕೊಂಡಿತ್ತು. ಮೂತ್ರದಲ್ಲೂ ಕೂಡ ರಕ್ತವಿತ್ತು. ಓಡಾಡಲೂ ಸಾಧ್ಯವಾಗುತ್ತಿರಲಿಲ್ಲ. ನಾಯಿಗೆ ಕೊರೋನಾ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿತ್ತು. ಕೆಲವು ದಿನಗಳ ಬಳಿಕ ಪರೀಕ್ಷೆ ನಡೆಸಿದಾಗ ನಾಯಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು. ನಾಯಿಗೆ ಹತ್ತು ತಿಂಗಳು ಇದ್ದಾಗಿನಿಂದ ರಾಬರ್ಟ್ ಸಾಕಿದ್ದರು. ಇಲ್ಲಿಯವರೆಗೆ ಯಾವುದೇ ಚಿಕ್ಕಪುಟ್ಟ ವ್ಯಾಧಿಯೂ ಇರಲಿಲ್ಲ ಎಂದು ರಾಬರ್ಟ್ ಹೇಳಿದ್ದಾರೆ.

ಕೊರೋನಾ ವಿಚಾರ; ಬಿಲ್ ಗೇಟ್ಸ್- ಎಲಾನ್‌ ಮಸ್ಕ್ ಮಧ್ಯೆ ಮಾತಿನ ಚಕಮಕಿ

ಅಂದಹಾಗೆ, ಅಮೆರಿಕದಲ್ಲಿ ಪ್ರಸ್ತುತ 12 ನಾಯಿಗಳು, ಹುಲಿ, ಸಿಂಹ ಹಾಗೂ 10 ಬೆಕ್ಕಿಗೆ ಕೊರೋನಾ ಸೋಂಕು ತಗುಲಿದೆ ಎಂದು ನ್ಯೂಯಾರ್ಕ್ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಾ ಮೊಬೈಲ್ ಬ್ಯಾನ್‌ಗೆ ಕೇಂದ್ರ ಸರ್ಕಾರ ಚಿಂತನೆ

newsics.com ನವದೆಹಲಿ: ಚೀನಾ ಕಂಪನಿಗಳ 12,000 ರೂ.ಗಳಿಗಿಂತ (150 ಡಾಲರ್) ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಮಾರಾಟ ನಿರ್ಬಂಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಕುಗ್ಗುತ್ತಿರುವ ದೇಶೀಯ ಮೊಬೈಲ್ ಉದ್ಯಮ...

ಮಹಿಳೆಯರ ಎದುರು ಬೆತ್ತಲಾಗುತ್ತಿದ್ದ ವ್ಯಕ್ತಿಯ ಸಜೀವ ದಹನಕ್ಕೆ ಯತ್ನ, ಸ್ಥಿತಿ ಗಂಭೀರ

newsics.com ಬೆತುಲ್(ಮಧ್ಯಪ್ರದೇಶ): ಮಹಿಳೆಯರು ಮತ್ತು ಯುವತಿಯರ ಎದುರು ಅಶ್ಲೀಲವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಊರಿನ ಜನರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಆತನ ಪರಿಸ್ಥಿತಿ ಚಿಂತಾಜನಕವಾಗಿದೆ. ಈ‌ ಸಂಬಂಧ ಇಬ್ಬರನ್ಮು‌ ಬಂಧಿಸಲಾಗಿದೆ ಈ ಘಟನೆ ಮಧ್ಯಪ್ರದೇಶದ...

ಹಾವಿಗೆ ಹಾಲಲ್ಲ, ರಕ್ತಾಭಿಷೇಕ!

newsics.com ವಿಜಯನಗರ: ಶ್ರಾವಣ ಮಾಸದ ಎರಡನೇ ಭಾನುವಾರ ನಾಗರ ಹುತ್ತಕ್ಕೆ ಪೂಜೆ ಮಾಡಿ ರಕ್ತಾಭಿಷೇಕ ಮಾಡುವ ವಿಶೇಷ ಆಚರಣೆ ವಿಜಯನಗರದ ಕೂಡ್ಲಿಗಿ ತಾಲೂಕಿನ ಬತ್ತನ ಹಳ್ಳಿಯಲ್ಲಿದೆ. ಕೊರಚ ಮತ್ತು‌ ಕೊರಮ ಸಮುದಾಯದ ಜನರು ನಾಗರ ಪಂಚಮಿ...
- Advertisement -
error: Content is protected !!