ಮೊಜಾಂಬಿಕ್ ನಲ್ಲಿ 30 ವರ್ಷಗಳ ಬಳಿಕ ಪೋಲಿಯೊ ಪತ್ತೆ

newsics.com ಮೊಜಾಂಬಿಕ್: 1992 ರ ನಂತರ ಅಂದರೆ 30 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಪೋಲಿಯೊ ಪ್ರಕರಣ ಮೊಜಾಂಬಿಕ್ ನಲ್ಲಿ ಪತ್ತೆಯಾಗಿದೆ. ಈ ವರ್ಷದಲ್ಲಿ ಮೊದಲ ಪ್ರಕರಣವು ಮಲಾವಿಯಲ್ಲಿ ಪತ್ತೆಯಾಗಿದ್ದು, ದಕ್ಷಿಣ ಆಫ್ರಿಕಾದಲ್ಲೂ ಪತ್ತೆಯಾಗಿದೆ. ಮೊಜಾಂಬಿಕ್ ನಲ್ಲಿನ ಪ್ರಕರಣವನ್ನು ಈಶಾನ್ಯ ಟೆಟೆ ಪ್ರಾಂತದಲ್ಲಿ ಗುರುತಿಸಲಾಗಿದ್ದು, ಸೋಂಕಿತ ಮಗು ಪಾರ್ಶ್ವವಾಯುಗೆ ಗುರಿಯಾಗಿದೆ. ಪೋಲಿಯೊ ಮಕ್ಕಳನ್ನು ಮಾರಣಾಂತಿಕವಾಗಿಯೂ ಪರಿಣಮಿಸುತ್ತದೆ. ಪೋಲಿಯೊ ಲಸಿಕೆಯಿಂದಾಗಿ ಈ ರೋಗವನ್ನು ನಿರ್ಮೂಲನೆ ಮಾಡಬಹುದಾಗಿದೆ.