Wednesday, October 5, 2022

ಹೆಲಿಕಾಪ್ಟರ್ ಉರುಳಿಬಿದ್ದರೂ ಹೃದಯ ಸುರಕ್ಷಿತ..!

Follow Us

newsics.com
ಲಾಸ್​ ಎಂಜಲೀಸ್​: ಹೃದಯ ಸಾಗಿಸುತ್ತಿದ್ದ ಹೆಲಿಕಾಪ್ಟರ್’ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಕೆಳಕ್ಕೆ ಬಿದ್ದಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ಆದರೆ, ಅದೃಷ್ಟವಶಾತ್ ಹೆಲಿಕಾಪ್ಟರ್​ನಲ್ಲಿದ್ದ ಹೃದಯ ಸುರಕ್ಷಿತವಾಗಿದೆ. ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆ ಮಾಡಲು ಹೃದಯವನ್ನು ಹೆಲಿಕಾಪ್ಟರ್​ನಲ್ಲಿ ಸಾಗಿಸುವಾಗ ಈ ದುರಂತ ಸಂಭವಿಸಿದೆ.
ಲಾಸ್​ ಎಂಜಲೀಸ್​ನ ಕೆಕ್​ ಆಸ್ಪತ್ರೆಯ ಮೇಲ್ಭಾಗದಲ್ಲಿ ಹೆಲಿಕಾಪ್ಟರ್ ಇಳಿಸುವ ವ್ಯವಸ್ಥೆ ಮಾಡಲಾಗಿತ್ತು. ಹೃದಯ ದಾನಿಯಿಂದ ಪಡೆದ ಹೃದಯವನ್ನು ಹೊತ್ತು ಬಂದಿದ್ದ ಹೆಲಿಕಾಪ್ಟರ್​ ಇನ್ನೇನು ಕೆಲ ಕ್ಷಣಗಳಲ್ಲಿ ಆಸ್ಪತ್ರೆಯ ಮೇಲ್ಭಾಗದಲ್ಲಿ ಇಳಿಯಬೇಕಿತ್ತು. ಕೊನೆಯ ಕ್ಷಣದಲ್ಲಿ ಹೆಲಿಕಾಪ್ಟರ್​ ತಿರುಗಲಾರಂಭಿಸಿದೆ. ಎರಡು ಮೂರು ಸುತ್ತು ತಿರುಗುತ್ತಾ ಇಳಿದ ಹೆಲಿಕಾಪ್ಟರ್​, ಅಡ್ಡವಾಗಿ ಬಿದ್ದಿದೆ. ತಕ್ಷಣ ಕಾರ್ಯನಿರತವಾದ ರಕ್ಷಣಾ ಸಿಬ್ಬಂದಿ, ಹೆಲಿಕಾಪ್ಟರ್​ನ ಮಧ್ಯಭಾಗದಲ್ಲಿದ್ದ ಹೃದಯವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಹೆಲಿಕಾಪ್ಟರ್​ ಪೈಲೆಟ್​ಗೆ ಸಣ್ಣ ಪುಟ್ಟ ಗಾಯಗಳಾಗಿವೆ ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

ಬದಲಾಯ್ತು ಡೊನಾಲ್ಡ್ ಟ್ರಂಪ್ ಡ್ರೆಸ್…!

ನ.17ರಿಂದ ಕಾಲೇಜು ತರಗತಿ ಆರಂಭ; ಸರ್ಕಾರದಿಂದ ಎಸ್ಓಪಿ ಪ್ರಕಟ

ದೀಪಾವಳಿ ಸಡಗರ; ದುಬಾರಿಯಾಯ್ತು ಚಿನ್ನ, ಬೆಳ್ಳಿ

ಸಿದ್ದರಾಮಯ್ಯ, ತೇಜಸ್ವಿ ಸೂರ್ಯ, ನಟ ದರ್ಶನ್’ಗೆ ತಲಾ 250 ರೂ. ದಂಡ

ಶತಮಾನಗಳ ಹಿಂದಿನ ಸೈನಿಕನ ಸಂದೇಶ ಪತ್ರ ಪತ್ತೆ

3ನೇ ಹಂತದ ಲಸಿಕೆ ಪ್ರಯೋಗ ಶೇ .90ರಷ್ಟು ಯಶಸ್ವಿಯಾಗಿದೆ- ಫಿಜರ್ ಸಂಸ್ಥೆ

ಕೆಂಪು ಬಣ್ಣಕ್ಕೆ ತಿರುಗಿದ ನದಿ ನೀರು: ಆತಂಕಗೊಂಡ ಜನರು

ಪ್ರಿ ವೆಡ್ಡಿಂಗ್ ಫೋಟೊಶೂಟ್; ತೆಪ್ಪ ಮುಳುಗಿ ವಧು, ವರ ಸಾವು

ಮತ್ತಷ್ಟು ಸುದ್ದಿಗಳು

vertical

Latest News

ಪ್ರಪಾತಕ್ಕೆ ಉರುಳಿದ ಬಸ್: 25 ಮಂದಿ ಸಾವು, 23 ಪ್ರಯಾಣಿಕರಿಗೆ ಗಾಯ

newsics.com ಪೌರಿ (ಉತ್ತರಾಖಂಡ): ಬಸ್ಸೊಂದು 500 ಮೀಟರ್ ಪ್ರಪಾತಕ್ಕೆ ಉರುಳಿದ ಪರಿಣಾಮ 25 ಪ್ರಯಾಣಿಕರು ಸಾವನ್ನಪ್ಪಿದ ಭೀಕರ ದುರಂತ ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ...

ಜಂಬೂಸವಾರಿಗೆ ಕ್ಷಣಗಣನೆ: ಇಂದು ಮಧ್ಯಾಹ್ನ ಚಾಲನೆ

newsics.com ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಬುಧವಾರ(ಅ.5) ಮಧ್ಯಾಹ್ನ 3 ಗಂಟೆ ಹೊತ್ತಿಗೆ ಜಂಬೂಸವಾರಿ ಆರಂಭಗೊಳ್ಳಲಿದೆ. ಬುಧವಾರ ಮಧ್ಯಾಹ್ನ 2.36ರಿಂದ 2.50ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ...

ದೇಶದ ಗಡಿಯಲ್ಲಿ ಶೃಂಗೇರಿ ಶಾರದೆಗೆ ಪೂಜೆ: ಇಂದು‌ ಮೂರ್ತಿ ಹಸ್ತಾಂತರ

newsics.com ಚಿಕ್ಕಮಗಳೂರು: ಭಾರತದ ಗಡಿಯಲ್ಲೂ ಶೃಂಗೇರಿಯ ಶಾರದೆ ಪೂಜೆಗೊಳ್ಳಲಿದ್ದಾಳೆ. ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಪ್ರದೇಶ ತೀತ್ವಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೆ ಶೃಂಗೇರಿ ಮಠದಿಂದ ಶಾರದೆಯ ಪಂಚಲೋಹ ವಿಗ್ರಹ ರವಾನೆಯಾಗಲಿದೆ. ಈ ವಿಗ್ರಹ ಹಸ್ತಾಂತರ ಕಾರ್ಯ ವಿಜಯದಶಮಿ ದಿನವಾರ...
- Advertisement -
error: Content is protected !!