ಬೋಟ್ಸ್ ವಾನ್: ಕರೋವೆ ಗಣಿ ಪ್ರದೇಶದಲ್ಲಿ ಅತಿದೊಡ್ಡ ಕಚ್ಚಾ ವಜ್ರ ಪತ್ತೆಯಾಗಿದೆ. ಈ ಶತಮಾನದಲ್ಲಿ ಸಿಕ್ಕ 2ನೇ ಅತಿದೊಡ್ಡ ಕಚ್ಚಾವಜ್ರ ಇದಾಗಿದೆ. ಹೀಗಾಗಿ ಸದ್ಯಕ್ಕೆ ಚಿನ್ನಾಭರಣ ಮಾರುಕಟ್ಟೆಯಲ್ಲಿ ಈ ವಜ್ರದ ಬಗ್ಗೆಯೇ ಮಾತು ಕೇಳಿಬರುತ್ತಿದೆ.
1,758 ಕ್ಯಾರೆಟ್ ಕಚ್ಚಾ ವಜ್ರ ಇದಾಗಿದ್ದು, ಈ ವಜ್ರಕ್ಕೆ ಸೆವೆಲೋ ಎಂದು ಹೆಸರಿಡಲಾಗಿದೆ.
ಲೂಯಿಸ್ ವಿಟಾನ್ ಕಂಪನಿ ಮೊದಲ ಬಾರಿಗೆ ಕಚ್ಚಾವಜ್ರ ಖರೀದಿಸಿದ್ದು, ಇದಕ್ಕಾಗಿ ತನ್ನ ವಾರ್ಷಿಕ ಆದಾಯದ 50ರಷ್ಟು ಹಣ ಖರ್ಚು ಮಾಡಿದೆ. ಅಂದರೆ, 1 ಲಕ್ಷ 13 ಸಾವಿರದ 400 ಕೋಟಿ ರೂ. ನೀಡಿ ಈ ಕಚ್ಚಾ ವಜ್ರ ಖರೀದಿಸಿದೆ. ಆಭರಣ ಮಾರುಕಟ್ಟೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವ ನಿಟ್ಟಿನಲ್ಲಿ ಇಂತಹ ಪ್ರಯೋಗಗಳನ್ನು ಮಾಡಲಾಗುತ್ತಿದೆ ಎಂದು ಲೂಯಿಸ್ ವಿಟಾನ್ ಕಂಪನಿಯ ಆಡಳಿತಾತ್ಮಕ ಮುಖ್ಯಸ್ಥ ಮೈಕಲ್ ಬುರ್ಕೆ ತಿಳಿಸಿದ್ದಾರೆ. ಅಂದಹಾಗೆ, ಈ ಕಚ್ಚಾವಜ್ರ ದಕ್ಷಿಣ ಆಫ್ರಿಕಾದ ಬೋಟ್ಸ್ ವಾನ್ ದೇಶದಲ್ಲಿರುವ ಕರೋವೆ ಗಣಿ ಪ್ರದೇಶದಲ್ಲಿ ಪತ್ತೆಯಾಗಿದೆ.
ಅತಿದೊಡ್ಡ ಕಚ್ಚಾವಜ್ರ ಪತ್ತೆ; 1 ಲಕ್ಷ 13 ಸಾವಿರದ 400 ಕೋಟಿ ರೂ.ಗೆ ಖರೀದಿ
Follow Us