ಉಗಾಂಡ: ವಿವಾಹವಾದ ಎರಡೇ ವಾರದಲ್ಲಿ ತನ್ನ ಪತ್ನಿ ಹೆಂಗಸಲ್ಲ, ಗಂಡಸು ಎಂದು ತಿಳಿದರೆ ಹೇಗಿರಬಹುದು, ಊಹಿಸಿಕೊಳ್ಳಿ.
ಇಂತಹದೊಂದು ಆಘಾತಕ್ಕೆ ಗುರಿಯಾಗಿದ್ದಾರೆ ಉಗಾಂಡಾದ ಮೊಹಮ್ಮದ್ ಮುತುಂಬ್ ಎಂಬ ವ್ಯಕ್ತಿ. ವಿವಿಧ ಕಾರಣಗಳಿಂದ ವಿವಾಹವಾದ ಎರಡು ವಾರಗಳವರೆಗೆ ದಂಪತಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರಲಿಲ್ಲ. ನಂತರ ಆತನಿಗೆ ತನ್ನ ಪತ್ನಿಯ ರೂಪದಲ್ಲಿರುವುದು ಗಂಡು ಎಂದು ತಿಳಿದುಬಂದಿದೆ.
ಈ ಕುರಿತು ದೂರು ನೀಡಿದಾಗ, ಆತ ತಾನು ದುಡ್ಡಿಗಾಗಿ ಹೆಣ್ಣಿನ ರೂಪದಲ್ಲಿ ಆತನನ್ನು ವಿವಾಹವಾಗಿರುವುದಾಗಿ ಒಪ್ಪಿಕೊಂಡಿದ್ದಾನೆ.