ಮಾಸ್ಕೊ: ಒಂದಲ್ಲ ಎರಡಲ್ಲ, ನೂರಾರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಅವರನ್ನು ಅಮಾನುಷವಾಗಿ ಕೊಂದಿದ್ದ ಅಪರಾಧಿಯೊಬ್ಬನಿಗೆ ಈಗ ಜ್ಞಾನೋದಯವಾದಂತಿದೆ.
ತಾನೇ ತನ್ನ ಕೃತ್ಯವನ್ನು ಒಪ್ಪಿಕೊಂಡಿರುವ ಅಪರಾಧಿ, ತನ್ನನ್ನು ಮರಣದಂಡನೆ ವಿಧಿಸುವಂತೆ ಮನವಿ ಮಾಡಿದ್ದಾನೆ. ಈತ ರಷ್ಯಾದ ಕುಖ್ಯಾತ ಕ್ರೂರ ಸರಣಿ ಹಂತಕ ಪೋಪ್ಕೊವ್. ಈತ ರಷ್ಯಾದ ಅಂಗಾರ್ಸ್ಕ್ ನಗರದ ನಿವಾಸಿ. ಈತನಿಗೀಗ 56 ವರ್ಷ. ಪೊಲೀಸ್ ಸೇವೆಯಲ್ಲಿದ್ದಾಗಲೇ ಅಂದರೆ 1990 ರ ದಶಕದಲ್ಲಿ 83 ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ ಅವರನ್ನು ಅಮಾನವೀಯ ರೀತಿಯಲ್ಲಿ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಆದರೆ, ಈ ಪ್ರಕರಣದ ತನಿಖಾಧಿಕಾರಿ ಆರೋಪಿ ಪೋಪ್ಕೊವ್ 200 ಕ್ಕೂ ಮಹಿಳೆಯರನ್ನು ಕೊಂದಿರುವ ಶಂಕೆಯಿದೆ ಎಂದು ಹೇಳಿದ್ದಾರೆ.
ಒಂಟಿ ಮಹಿಳೆಯರೇ ಟಾರ್ಗೆಟ್
ಕೋರ್ಟ್’ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಇವನಿಂದಲೇ ಹತ್ಯೆಯಾದ ಯುವತಿಯ ತಂದೆಯೊಬ್ಬರು, ಆರೋಪಿಗೆ ಮರಣದಂಡನೆ ವಿಧಿಸುವಂತೆ ಮನವಿ ಮಾಡಿದ್ದಾರೆ. ನಗರ ಪ್ರದೇಶದಲ್ಲಿ ಮಹಿಳೆಯರು ಒಂಟಿಯಾಗಿ ಹೋಗುತ್ತಿದ್ದುದನ್ನು ಕಂಡರೆ ಅವರ ಕತೆ ಮುಗಿದಂತೆಯೇ. ಅವರ ಬಳಿ ಕಾರಲ್ಲಿ ತೆರಳಿ, ತೀರಾ ಕಾಳಜಿ ತೋರಿಸಿ ಲಿಫ್ಟ್ ಕೊಡುವುದಾಗಿ ನಂಬಿಸುತ್ತಿದ್ದ. ಆತನ ಮಾತನ್ನು ನಂಬಿ ಕಾರು ಹತ್ತಿದರೆ ಅವರ ಕತೆ ಅಲ್ಲಿಗೆ ಸಮಾಪ್ತಿ ಆದಂತೆಯೇ ಸರಿ. ಕಾರು ಹತ್ತದವರನ್ನು ಶೂಟ್ ಮಾಡಿರುವುದಾಗಿಯೂ ಪೋಪ್ಕೊವ್ ಹೇಳಿದ್ದಾನೆ.
ಪೋಪ್ಕೊವ್ ಮನೆಯಲ್ಲಿ ಮಹಿಳೆಯರ ಅಸ್ಥಿಪಂಜರ!
ಪ್ರತಿ ಮಹಿಳೆ ಮೇಲೆ ಅತ್ಯಾಚಾರ ಹಾಗೂ ಆಕೆಯನ್ನು ಕೊಲೆ ಮಾಡುವಾಗ ಮಧ್ಯಪಾನ ಮಾಡಿರುತ್ತಿದ್ದುದಾಗಿ ವಿಚಾರಣೆ ವೇಳೆ ಪೋಪ್ಕೊವ್ ಹೇಳಿಕೊಂಡಿದ್ದಾನೆ. ಬಹುತೇಕ ಎಲ್ಲ ಮಹಿಳೆಯರ ಕೊಲೆಯೂ ಒಂದೇ ರೀತಿ ಇರುತ್ತಿತ್ತು ಎಂದೂ ಹೇಳಿದ್ದಾನೆ. ಈತ ಹತ್ಯೆ ಮಾಡಿರುವ ಕೆಲ ಮಹಿಳೆಯರ ಅಸ್ಥಿಪಂಜರವೂ ಪೋಪ್ಕೊವ್ ಮನೆಯಲ್ಲಿ ಸಿಕ್ಕಿದೆ. ಅಪರಾಧಿ ಪೋಪ್ಕೊವ್ ಈಗ ಮೊರ್ಡೋವಿಯಾದ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದು, ಮರಣದಂಡನೆ ವಿಧಿಸುವಂತೆ ಕೋರ್ಟ್’ಗೆ ಮನವಿ ಮಾಡಿದ್ದಾನೆ.
ನೂರಾರು ಮಹಿಳೆಯರ ರೇಪ್ ಮಾಡಿ, ಕೊಂದವನಿಗೆ ಈಗ ಜ್ಞಾನೋದಯ!
Follow Us