ಫ್ಲೋರಿಡಾ: ಹೆದರ್ ಚಿಸಮ್, ವಿಚ್ಛೇದಿತ ಉದ್ಯೋಗಸ್ಥೆ. ಮಗನನ್ನು ಡೇ ಕೇರ್ ನಲ್ಲಿ ಬಿಟ್ಟು ಕೆಲಸಕ್ಕೆ ಹೋಗುವುದು ರೂಢಿ. ಹೊಟ್ಟೆಪಾಡಿಗಾಗಿ ಮತ್ತು ಮಗನ ಉತ್ತಮ ಭವಿಷ್ಯಕ್ಕಾಗಿ ಆಕೆ ದುಡಿಯಲೇಬೇಕಿತ್ತು.
ಕೆಲಸದ ಒತ್ತಡದಲ್ಲಿ ಕೆಲವು ದಿನಗಳಿಂದ ಆತನ ಬ್ಯಾಗ್ ಪರೀಕ್ಷಿಸಲು ಸಾಧ್ಯವಾಗಿರಲಿಲ್ಲ. ಆ ಮಗುವಿನ ಡೈಪರ್ ಖಾಲಿಯಾಗಿದ್ದರಿಂದ ಹೆದರ್ಗೆ ಒಂದು ನೋಟ್ ಕಳುಹಿಸಿದ್ದರು. ಇದರಿಂದ ಡೇ ಕೇರ್ ನ ಶಿಕ್ಷಕಿ ಆ ಮಗುವಿನ ಹೊಟ್ಟೆಯ ಮೇಲೇ ಮಾರ್ಕರ್ನಲ್ಲಿ ‘ಅಮ್ಮ, ನನ್ನ ಡೈಪರ್ ಖಾಲಿ ಆಗಿದೆ. ದಯವಿಟ್ಟು ನನ್ನ ಬ್ಯಾಗ್ನಲ್ಲಿರುವ ನೋಟ್ ನೋಡು’ ಎಂದು ಬರೆದು ಕಳುಹಿಸಿದ್ದರು. ಅಮ್ಮ ಆಫೀಸಿನಿಂದ ಬಂದಕೂಡಲೆ ಹೊಟ್ಟೆಯ ಮೇಲೆ ಬರೆದಿರುವುದನ್ನು ತೋರಿಸು ಎಂದು ಟೀಚರ್ ಹೇಳಿದ್ದರಿಂದ ಆ ಬಾಲಕ ಶರ್ಟ್ ಎತ್ತಿಕೊಂಡು ಸೋಫಾ ಮೇಲೆ ಮಲಗಿದ್ದ. ಆಫೀಸಿನಿಂದ ಬರುತ್ತಿದ್ದಂತೆ ಮಗನ ಅವತಾರವನ್ನು ನೋಡಿದ ಹೆದರ್ ಕೋಪದಿಂದ ಟೀಚರ್ಗೆ ಫೋನ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಡೈಪರ್ ಖಾಲಿಯಾಗಿದೆ ಎಂದು ಮಗುವಿನ ಹೊಟ್ಟೆ ಮೇಲೇ ಬರೆದ ಶಿಕ್ಷಕಿ!
Follow Us