Saturday, December 10, 2022

ಟ್ರಂಪ್ ಹಿನ್ನಡೆ; ಅಮೆರಿಕದ ಹಲವೆಡೆ ಪ್ರತಿಭಟನೆ, ಹಿಂಸಾಚಾರ

Follow Us

newsics.com
ವಾಷಿಂಗ್ಟನ್: ಟ್ರಂಪ್ ಮತ್ತು ಬಿಡೆನ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಬಿಡೆನ್ ಗೆಲುವಿನ ಸನಿಹದಲ್ಲಿದ್ದಾರೆ.
ಡೊನಾಲ್ಡ್‌ ಟ್ರಂಪ್ ಬಹುಮತ ಮ್ಯಾಜಿಕ್ ನಂಬರ್ ತಲುಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಮೆರಿಕದ ಹಲವೆಡೆ ಈಗ ಹಿಂಸಾಚಾರ ಆರಂಭವಾಗಿದೆ.
ಟ್ರಂಪ್ ಹಿನ್ನಡೆ ಹಿನ್ನೆಲೆಯಲ್ಲಿ ಈಗಾಗಲೇ ಅಮೆರಿಕದೆಲ್ಲೆಡೆ ರಿಪಬ್ಲಿಕನ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.
ಭಾರತೀಯ ಕಾಲಮಾನ ಗುರುವಾರ ಮಧ್ಯಾಹ್ನ 2 ಗಂಟೆವರೆಗಿನ ಮತ ಎಣಿಕೆ ಲೆಕ್ಕಾಚಾರಗಳ ಪ್ರಕಾರ, ಟ್ರಂಪ್ ಬಹುಮತ ಪಡೆಯಲು ಕನಿಷ್ಟ 56 ಎಲೆಕ್ಟ್ರೋಲ್ ಮತಗಳು ಬೇಕು. ಆದ್ರೆ, ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಅವರು ಬಹುಮತ ಗಿಟ್ಟಿಸಲು ಕೇವಲ 6 ಎಲೆಕ್ಟ್ರೋಲ್ ಮತಗಳು ಸಾಕಾಗಿದೆ. ಈ ಪೈಕಿ ನವೆಡಾ ರಾಜ್ಯದಲ್ಲಿ 6 ಎಲೆಕ್ಟ್ರೋಲ್ ಮತಗಳಿದ್ದು, ಈ ಪೈಕಿ 2ರಲ್ಲಿ ಬಿಡೆನ್ ಮುನ್ನಡೆಯಲ್ಲಿದ್ದಾರೆ. ಜಾರ್ಜಿಯಾ, ನಾರ್ಥ್ ಕೆರೋಲಿನಾ, ಪೆನ್ಸೆಲ್ವೇನಿಯಾ ಹಾಗೂ ಅಲಾಸ್ಕಾ ರಾಜ್ಯಗಳಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಟ್ರಂಪ್ ಮುನ್ನಡೆಯಲ್ಲಿದ್ದಾರೆ. ಮತ ಎಣಿಕೆ ಪ್ರಗತಿಯಲ್ಲಿರುವ ಐದೂ ರಾಜ್ಯಗಳ ಎಲ್ಲಾ ಎಲೆಕ್ಟ್ರೋಲ್ ಮತಗಳೂ ಟ್ರಂಪ್‌ ಅವರಿಗೇ ಬಂದರೂ ಕೂಡಾ ಮತ್ತೊಮ್ಮೆ ಅವರು ಅಧ್ಯಕ್ಷ ಪದವಿಗೆ ಏರಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಮುನ್ನಡೆಯಲ್ಲಿ ಜೊ ಬಿಡೆನ್

ವಿಷಕಾರಿ ಮದ್ಯಸೇವಿಸಿ 20 ಮಂದಿ ಸಾವು

ಶಾಲೆಯಲ್ಲಿ ರಾತ್ರಿ ಕಳೆದ ಅರ್ನಾಬ್ ಗೋ ಸ್ವಾಮಿ

ಭಾಗಲ್ಪುರದಲ್ಲಿ ದೋಣಿ ಮುಳುಗಡೆ: ನೂರು ಮಂದಿ ನಾಪತ್ತೆ

ಮತ್ತಷ್ಟು ಸುದ್ದಿಗಳು

vertical

Latest News

ಡಿಸೆಂಬರ್ 15ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ರಾಜ್ಯಕ್ಕೆ ಭೇಟಿ

newsics.com ಬೆಂಗಳೂರು:  ಗುಜರಾತ್ ಚುನಾವಣೆ ಬಳಿಕ ಬಿಜೆಪಿ ಹೈಕಮಾಂಡ್ ಇದೀಗ ರಾಜ್ಯದತ್ತ ದೃಷ್ಟಿ ನೆಟ್ಟಿದೆ. ಇದರ ಮೊದಲ ಭಾಗವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ...

ಕಾರ್ಕಳ ಬಳಿ ಭೀಕರ ಅಪಘಾತ: ದಂಪತಿ, ಮಗು ಸಹಿತ ಮೂವರ ಸಾವು

newsics.com ಮಂಗಳೂರು:  ಉಡುಪಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ  ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಕಾರ್ಕಳದ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿರುವ ಮೈನೇರು ಎಂಬಲ್ಲಿ ಈ ದುರಂತ ಸಂಭವಿಸಿದೆ. ಖಾಸಗಿ ಬಸ್ ಮತ್ತು...

ಇಂಡಿಗೋ ವಿಮಾನದಲ್ಲಿ ಹರಿದ ಸೀಟು: ಪೇಟಿಎಂ‌ ಸಿಇಒಗೆ ಅಚ್ಚರಿ!

newsics.com ಮುಂಬೈ: ನೀವು ಬಸ್‌ನಲ್ಲೋ, ಆಟೋದಲ್ಲೋ ಹರಿದ ಸೀಟುಗಳನ್ನು ನೋಡಿರಬಹುದು. ಆದರೆ ವಿಮಾನದಲ್ಲೂ ಹರಿದ ಸೀಟಿನ ಚಿತ್ರವನ್ನು ಪೇಟಿಎಂ ಸಿಇಒ Paytm CEO ಹಂಚಿಕೊಂಡಿದ್ದಾರೆ. 'ಈ ಏರ್‌ಲೈನ್‌ನಲ್ಲಿ ಮಾತ್ರ ಇಂತಹ ಹರಿದ ಸೀಟನ್ನು ಮೊದಲು ನೋಡಲಾಗಿದೆ'...
- Advertisement -
error: Content is protected !!