newsics.com
ವಾಷಿಂಗ್ಟನ್: ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ದೇಶದ 2 ಐಐಟಿಗೆ ಸೇರಿದ 36 ವಿಜ್ಞಾನಿಗಳು ಸ್ಥಾನ ಪಡೆದಿದ್ದಾರೆ.
ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಶೇ.2ರಷ್ಟು ಅಂದರೆ 36 ವಿಜ್ಞಾನಿಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಈ ಎಲ್ಲ ವಿಜ್ಞಾನಿಗಳು ದೇಶದ 2 ಪ್ರತಿಷ್ಠಿತ ಐಐಟಿಗೆ ಸೇರಿದವರಾಗಿದ್ದಾರೆ. ಇದರಲ್ಲಿ ಗುವಾಹಟಿ ಐಐಟಿಯ 22 ಸಂಶೋಧಕರು, ಬನಾರಸ್ ಹಿಂದು ವಿವಿಯ 14 ಪ್ರೊಫೆಸರ್‌ಗಳು ಸ್ಥಾನ ಪಡೆದಿದ್ದಾರೆ.
1,59,683 ಸಂಶೋಧಕರನ್ನು ಆಯ್ಕೆ ಮಾಡಲಾಗಿದ್ದು ಇದರಲ್ಲಿ 1,500 ಭಾರತೀಯ ವಿಜ್ಞಾನಿಗಳಿದ್ದಾರೆ. ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿವಿಯ ಪ್ರೊ ಜಾನ್ ಪಿಎ ಲೋನ್ನಿಡಿಸ್ ಮತ್ತವರ ತಂಡ ಈ ವರದಿ ಸಿದ್ಧಪಡಿಸಿದ್ದು, 2019ರವರೆಗಿನ ಅಂಕಿ ಅಂಶದ ಆಧಾರದಲ್ಲಿ, ತಮ್ಮ ವೃತ್ತಿಜೀವನದ ಅವಧಿಯಲ್ಲಿ ನಡೆಸಿದ ಸಂಶೋಧನೆಗಳನ್ನು ಪರಿಗಣಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಹೇಳಿದ್ದಾರೆ.
ಬನಾರಸ್ ಹಿಂದು ವಿವಿಯ ಅಧೀನದಲ್ಲಿರುವ ಐಐಟಿಯ 14 ಪ್ರೊಫೆಸರ್‌ಗಳನ್ನು ಈ ಪ್ರತಿಷ್ಟಿತ ಪಟ್ಟಿಗೆ ಪರಿಗಣಿಸಲಾಗಿದೆ ಎಂದು ಬಿಎಚ್‌ಯು ಐಐಟಿ ನಿರ್ದೇಶಕ ಪ್ರಮೋದ್ ಕುಮಾರ್ ಜೈನ್ ಹೇಳಿದ್ದಾರೆ.
ಬಂಗಾಳಿ ನಟ ಸೌಮಿತ್ರಾ ಚಟರ್ಜಿ ಸ್ಥಿತಿ ಚಿಂತಾಜನಕ
ಸಿಡ್ನಿಯಲ್ಲಿ ತರಬೇತಿ ವಿಮಾನ ಪತನ, ಟೀಮ್ ಇಂಡಿಯಾ ಪಾರು
ಸಿಎಂ ರಾಜಕೀಯ ಸಲಹೆಗಾರ ಹುದ್ದೆಯಿಂದ ಎಂ.ಬಿ. ಮರಂಕಲ್’ಗೆ ಕೊಕ್