newsics.com
ವಾಷಿಂಗ್ಟನ್: ಅಮೆರಿಕದಲ್ಲಿ ನಿರ್ಮಾಣವಾಗಿರುವ ವಿಶ್ವದ ಎರಡನೇ ಅತಿ ದೊಡ್ಡ ಹಿಂದೂ ದೇವಾಲಯ ಬಿಪಿಎಸ್ ಸ್ವಾಮಿನಾರಾಯಣ ಅಕ್ಷರಧಾಮವು ಲೋಕಾರ್ಪಣೆಗೆ ಸಿದ್ಧವಾಗಿದೆ
ನ್ಯೂಜೆರ್ಸಿಯ ರಾಬಿನ್ಸ್‌ವಿಲ್ಲೆಯಲ್ಲಿ ನಿರ್ಮಾಣವಾಗಿರುವ ದೇಗುಲ ಉದ್ಘಾಟನಾ ಕಾರ್ಯಕ್ರಮ ಸೆಪ್ಟೆಂಬರ್ 30ರಂದೇ ಆರಂಭಗೊಂಡಿದ್ದು. ಅಕ್ಟೋಬರ್ 8ರಂದು ಮಹಂತ್ ಸ್ವಾಮಿ ಮಹಾರಾಜ್ ಮತ್ತು ಇತರರು ಉದ್ಘಾಟಿಸಲಿದ್ದಾರೆ.
ದೇಗುಲಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಶುಭಾಶಯ ಕೋರಿದ್ದಾರೆ.
ದೇವಾಲಯವನ್ನು ಭಾರತದಲ್ಲಿಯೇ ವಿನ್ಯಾಸಗೊಳಿಸಲಾಗಿದೆ. ಯುರೋಪಿನ ಅನೇಕ ಭಾಗಗಳಿಂದ ಅನೇಕ ಮಾದರಿಯ ಕಲ್ಲುಗಳನ್ನು ಭಾರತಕ್ಕೆ ತಂದು, ಕೆತ್ತನೆ ಮಾಡಿ ಅಮೆರಿಕಕ್ಕೆ ಕಳುಹಿಸಲಾಯಿತು.